Karnataka Election Survey:
ಬೆಂಗಳೂರು :
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ದಿನಗಣನೆ ಶುರುವಾಗಿದೆ. ಈಶಾನ್ಯ ರಾಜ್ಯಗಳ ಚುನಾವಣಾ ದಿನಾಂಕ ಈಗಾಗ್ಲೇ ಘೋಷಣೆ ಆಗಿದ್ದು, ಮಾರ್ಚ್ 2ರಂದು ಫಲಿತಾಂಶ ಬರಲಿದೆ. ಆದಾದ ಬಳಿಕ ಕರ್ನಾಟಕ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಈ ನಡುವೆ, ಕರ್ನಾಟಕದ ನಂಬರ್ ಒನ್ ಡಿಜಿಟಲ್ ಮೀಡಿಯಾ, ಕರ್ನಾಟಕ ಟಿವಿ ಜನವರಿ ಸಮೀಕ್ಷೆಯನ್ನ ಪ್ರಸಾರ ಮಾಡಿದೆ. ಕಳೆದ 4 ತಿಂಗಳಿನಿಂದ ಪ್ರತಿ ತಿಂಗಳು, ಆಯಾ ತಿಂಗಳ ಟ್ರೆಂಡ್ ಕೊಡ್ತಿರೋ ಕರ್ನಾಟಕ ಟಿವಿ, ಜನವರಿಯಲ್ಲೂ ಸಮೀಕ್ಷೆಯನ್ನ ಪ್ರಸಾರ ಮಾಡಿದೆ.
ಕರ್ನಾಟಕ ಟಿವಿ ಜನವರಿ ಟ್ರೆಂಡ್
ಪಕ್ಷ
ಬಿಜೆಪಿ – 99
ಕಾಂಗ್ರೆಸ್ – 79
ಜೆಡಿಎಸ್ – 41
ಆಪ್ – 02
ಕೆಆರ್ ಪಿಪಿ – 01
ಪಕ್ಷೇತರ – 02
ಜನವರಿಯಲ್ಲೂ ಅತಂತ್ರ ವಿಧಾನಸಭೆ ಯಾಕೆ.?
ಸದ್ಯ ರಾಜ್ಯದಲ್ಲಿ ಈಗಲೂ ಅತಂತ್ರ ಫಲಿತಾಂಶ ಬರಲಿದೆ ಅನ್ನೋದು ಕರ್ನಾಟಕ ಟಿವಿಯ ಜನವರಿ ಟ್ರೆಂಡ್. ಈ ಕ್ಷಣಕ್ಕೆ ಜೆಡಿಎಸ್ ಪಕ್ಷ ಮಾತ್ರ 93 ಅಭ್ಯರ್ಥಿಗಳ ಪಟ್ಟಿಯನ್ನ ಘೋಷಣೆ ಮಾಡಿದೆ. ಹೀಗಾಗಿ, ಕೆಲವೊಂದು ಕ್ಷೇತ್ರಗಳಲ್ಲಿ ಜೆಡಿಎಸ್ ಮುನ್ನಡೆ ಕಾಯ್ದುಕೊಂಡಿದೆ. ಜೆಡಿಎಸ್ ಅಭ್ಯರ್ಥಿ ಫೈನಲ್ ಆಗಿರೋ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿಗೆ ಇನ್ನೂ ಅಭ್ಯರ್ಥಿಗಳ ಗೊಂದಲ ಇದೆ. ಹೀಗಾಗಿ, ಈ ಕ್ಷಣಕ್ಕೆ ಜೆಡಿಎಸ್ ಮುನ್ನಡೆಯನ್ನ ಕಾಯ್ದುಕೊಂಡಿದೆ. ಜೊತೆಗೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಉಳಿದ ಎರಡೂ ಪಕ್ಷಗಳಿಗಿಂತ ಮುನ್ನಡೆಯನ್ನ ಕಾಯ್ದುಕೊಂಡಿದ್ದು, ಪಂಚರತ್ನ ಕೂಡ ಯಶಸ್ವಿಯಾಗಿ ಸಾಗ್ತಿದೆ. ಈ ಕಾರಣಕ್ಕೆ 41 ಕ್ಷೇತ್ರಗಳಲ್ಲಿ ಜೆಡಿಎಸ್ ಮುನ್ನಡ ಪಡೆದುಕೊಂಡಿದೆ.
ದೊಡ್ಡ ಪಕ್ಷವಾಗಲು ಕಾಂಗ್ರೆಸ್ ವರ್ಸಸ್ ಬಿಜೆಪಿ ಫೈಟ್..!
ಕಳೆದ 4 ತಿಂಗಳ ಕರ್ನಾಟಕ ಟಿವಿಯ ಟ್ರೆಂಡ್ ನಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಂದಿಲ್ಲ. ಅತಂತ್ರವಾಗುತ್ತಲೇ ಇದೆ. ಬಿಜೆಪಿ ವರ್ಸಸ್ ಕಾಂಗ್ರೆಸ್, ಎರಡೂ ಪಕ್ಷಗಳು ದೊಡ್ಡ ಪಕ್ಷ ಆಗೋದಕ್ಕೆ ತೀವ್ರ ಪೈಪೋಟಿ ನಡೆಸ್ತಿವೆ. ಡಿಸೆಂಬರ್ ನಲ್ಲಿ ಬಿಜೆಪಿ-ಕಾಂಗ್ರೆಸ್ ತೀರ ನೇರ ಸ್ಪರ್ಧೆಯನ್ನ ಎದುರಿಸಿದ್ವು. ಆದ್ರೆ, ಜನವರಿ ವೇಳೆಗೆ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಮಾಡಿದ್ರೂ, ಬಿಜೆಪಿಯನ್ನ ಬೀಟ್ ಮಾಡೋಕೆ ಆಗ್ತಿಲ್ಲ. ಡಿಕೆ ಶಿವಕುಮಾರ್ ವರ್ಸಸ್ ಸಿದ್ದರಾಮಯ್ಯ ಕದನಕ್ಕೆ ಸದ್ಯಕ್ಕೆ ಮುಗಿಯೋ ಲಕ್ಷಣಗಳು ಕಾಣ್ತಿಲ್ಲ. ಆಂತರಿಕ ಜಗಳ, ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗದೇ ಇರೋ ಕಾರಣ, ಜೊತೆಗೆ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಹಿಂದು ವಿರೋಧಿ ಮಾತುಗಳು ಕಾಂಗ್ರೆಸ್ ಗೆ ಒಂದ್ ರೀತಿ ಮುಳ್ಳಾಗಿ ಪರಿಣಮಿಸಿದೆ. ಜೊತೆಗೆ ಆಮ್ ಆದ್ಮಿ ಪಕ್ಷ, ಎಸ್ ಡಿ ಪಿ ಐ, ಜನಾರ್ದರ ರೆಡ್ಡಿ ಪಕ್ಷದ ಎಂಟ್ರಿಯಿಂದಾಗಿ ಕಾಂಗ್ರೆಸ್ ತೀವ್ರ ಪೈಪೋಟಿಯನ್ನ ಎದುರಿಸಬೇಕಿದೆ.
ಗೆದ್ದೇ ಗೆಲ್ತೀವಿ, ಮುಂದೆಯೂ ನಮ್ಮದೇ ಸರ್ಕಾರ ಅಂತ ಬೀಗ್ತಿರೋ ಬಿಜೆಪಿ ಕೂಡ, ಬಹು ಮತ ಪಡೆಯೋದು ಕಷ್ಟ ಸಾಧ್ಯ. ಬಿಜೆಪಿ ಸರ್ಕಾರ ಹಾಗೂ ಕರ್ನಾಟಕದಲ್ಲಿ ಪಕ್ಷ ಇನ್ನೂ ಕೂಡ ಟೇಕ್ ಅಪ್ ಆಗಿಲ್ಲ. ಸಿಎಂ ಬೊಮ್ಮಾಯಿ ನೋಡಿ ಜನ ಮತ ಹಾಕೋದು ಡೌಟು. ಸ್ವಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನೇ ನೋಡಿ ಜನ ಈ ಬಾರಿ ಮತ ಹಾಕ್ತೀವಿ ಎನ್ನೋ ಮಾತು ತುಂಬಾ ಕಡೆ ಕೇಳಿ ಬರ್ತಿದೆ. ಭ್ರಷ್ಟಾಚಾರ ಆರೋಪ, ವಲಸಿಗರು ವರ್ಸಸ್ ಮೂಲ ಬಿಜೆಪಿಗರ ಕಿತ್ತಾಟ, ರಾಜ್ಯಾಧ್ಯಕ್ಷ ಕಟೀಲು ಹಿಡಿತ ಕಡಿಮೆ, ಬಿಎಸ್ ಯಡಿಯೂರಪ್ಪ ಕಡೆಗಣನೆ, ಯತ್ನಾಳ್ ವರ್ಸಸ್ ನಿರಾಣಿ, ಯತ್ನಾಳ್ ವರ್ಸಸ್ ಸಿಎಂ ಬೊಮ್ಮಾಯಿ.. ಹೀಗೆ ಸಾಲು ಸಾಲು ವೈಫಲ್ಯಗಳು, ಡ್ಯಾಮೇಜ್ ಬಿಜೆಪಿಗೆ ಆಗ್ತಿದೆ.
ಕಿತ್ತೂರು ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ.?
ಕಿತ್ತೂರು ಕರ್ನಾಟಕ ಭಾಗದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹುಬ್ಬಳ್ಳಿ-ಧಾರವಾಡ, ಹಾವೇರಿ ಆರು ಜಿಲ್ಲೆಗಳು ಸೇರಿ ಒಟ್ಟು 50 ವಿಧಾನಸಭಾ ಕ್ಷೇತ್ರ ಬರುತ್ತೆ. ಲಿಂಗಾಯಿತ ಪ್ರಾಬಲ್ಯ ಇರುವಂತಹ ಕ್ಷೇತ್ರಗಳು ಹೆಚ್ಚು. ಜೊತೆಗೆ ಹುಬ್ಬಳ್ಳಿ-ಬೆಳಗಾವಿ ಕೇಂದ್ರೀಕೃತ ರಾಜಕಾರಣ ಹೆಚ್ಚು ಈ ಭಾಗದಲ್ಲಿ. ಕರ್ನಾಟಕ ಟಿವಿಯ ಜನವರಿ ಟ್ರೆಂಡ್ ಪ್ರಕಾರ ಕಿತ್ತೂರು ಕರ್ನಾಟಕ ಭಾಗದ 50 ಕ್ಷೇತ್ರಗಳ ಪೈಕಿ, ಬಿಜೆಪಿ ಅತೀ ಹೆಚ್ಚು 29 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ರೆ, ಕಾಂಗ್ರೆಸ್ 19, ಜೆಡಿಎಸ್ 02 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.
ಕಿತ್ತೂರು ಕರ್ನಾಟಕ (50)
ಕರ್ನಾಟಕ ಟಿವಿ ಜನವರಿ ಟ್ರೆಂಡ್
ಬಿಜೆಪಿ – 29
ಕಾಂಗ್ರೆಸ್ – 19
ಜೆಡಿಎಸ್ – 02
ಇತೆರೆ – 00
—
ಕಲ್ಯಾಣ ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು.?
ಕಲ್ಯಾಣ ಕರ್ನಾಟಕದಲ್ಲಿ ಏಳು ಜಿಲ್ಲೆ ಬರುತ್ತೆ. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ. ಒಟ್ಟು 41 ಕ್ಷೇತ್ರಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಬರುತ್ತೆ. ಬಿಜೆಪಿ ಎಸ್ ಸಿ – ಎಸ್ ಟಿ ಮೀಸಲಾತಿ ಹೆಚ್ಚಳ ವಿಚಾರವನ್ನ ಎನ್ ಕ್ಯಾಷ್ ಮಾಡಿಕೊಳ್ಳಲು ರೆಡಿಯಾಗಿದ್ರೆ, ಜನಾರ್ದನ ರೆಡ್ಡಿ ಪಕ್ಷ ಘೋಷಣೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಹಿನ್ನಡೆ ಆಗೋ ಚಾನ್ಸ್ ಇದೆ. ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳ ಪೈಕಿ ಬಿಜೆಪಿ 14, ಕಾಂಗ್ರೆಸ್ 21, ಜೆಡಿಎಸ್ 4, ರೆಡ್ಡಿ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 1 ಹಾಗೂ ಆಪ್ ಒಂದು ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿದೆ. ರೆಡ್ಡಿ ಹಾಗೂ ಆಪ್ ಪಕ್ಷ ಮುಂದಿನ ದಿನಗಳಲ್ಲಿ ಮತ್ತಷ್ಟು ಡ್ಯಾಮೇಜ್ ಮಾಡುವ ಸಾಧ್ಯತೆ ಇದೆ.
ಕಲ್ಯಾಣ ಕರ್ನಾಟಕ (41)
ಕರ್ನಾಟಕ ಟಿವಿ ಜನವರಿ ಟ್ರೆಂಡ್
ಬಿಜೆಪಿ – 14
ಕಾಂಗ್ರೆಸ್ – 21
ಜೆಡಿಎಸ್ – 04
ಕೆ ಆರ್ ಪಿ ಪಿ – 01
ಆಪ್ – 01
—-
ಮಧ್ಯ ಕರ್ನಾಟಕ ಯಾವ ಪಕ್ಷಕ್ಕೆ ಎಷ್ಟು ಸೀಟು.?
ಮಧ್ಯ ಕರ್ನಾಟಕ (25)
ಕರ್ನಾಟಕ ಟಿವಿ ಜನವರಿ ಟ್ರೆಂಡ್
ಮಧ್ಯ ಕರ್ನಾಟಕಕ್ಕೆ 4 ಜಿಲ್ಲೆ ಸೇರುತ್ವೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ದಾವಣಗೆರೆ. 4 ಜಿಲ್ಲೆಗಳಿಂದ ಒಟ್ಟು 25 ಕ್ಷೇತ್ರ ಇವೆ. ಸದ್ಯ ಕರ್ನಾಟಕ ಟಿವಿಯ ಜನವರಿ ಟ್ರೆಂಡ್ ನಲ್ಲಿ ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ಹೆಚ್ಚಿನ ಒಲವು ಕಂಡು ಬರ್ತಿದೆ. ಒಟ್ಟು 25 ಕ್ಷೇತ್ರಗಳ ಪೈಕಿ ಬಿಜೆಪಿ 15 ಸ್ಥಾನ, ಕಾಂಗ್ರೆಸ್ 7, ಜೆಡಿಎಸ್ 3 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಮಧ್ಯ ಕರ್ನಾಟಕ (25)
ಕರ್ನಾಟಕ ಟಿವಿ ಜನವರಿ ಟ್ರೆಂಡ್
ಬಿಜೆಪಿ – 15
ಕಾಂಗ್ರೆಸ್ – 07
ಜೆಡಿಎಸ್ – 03
—
ಕರಾವಳಿ ಕರ್ನಾಟಕ
ಕರಾವಳಿ ಕರ್ನಾಟಕ ಭಾಗದಲ್ಲಿ ಮೂರು ಜಿಲ್ಲೆಯ 19 ಕ್ಷೇತ್ರಗಳ ಸೇರುತ್ವೆ. ಬಿಜೆಪಿಗರಿಗೆ ಭದ್ರಕೋಟೆ. ಹಿಂದುತ್ವ ಅಜೆಂಡಾದ ಪ್ರಮುಖ ಕ್ಷೇತ್ರಗಳು ಈ ಭಾಗಕ್ಕೆ ಬರುತ್ವೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಕರಾವಳಿ ಭಾಗದಲ್ಲಿ ಬರುತ್ವೆ. ಹಿಂದುತ್ವ ಅಜೆಂಡಾ ಒಂದೇ ಬಿಜೆಪಿಗೆ ಇಲ್ಲಿ ಆಗ್ತಿರೋ ಪ್ಲಸ್ ಪಾಯಿಂಟ್. ಜೆಡಿಎಸ್ ಗೆ ಇಲ್ಲ ಠೇವಣಿ ಬರಲ್ಲ. ಸದ್ಯಕ್ಕೆ ಅಭ್ಯರ್ಥಿಗಳೇ ಇಲ್ಲ. ಕಾಂಗ್ರೆಸ್ ವರ್ಸಸ್ ಬಿಜೆಪಿ ಪೈಪೋಟಿ ಜೋರಾಗಿದೆ. ಆದ್ರೂ, ಕಾಂಗ್ರೆಸ್ ಇನ್ನೂ ಟೇಕ್ ಅಪ್ ಆಗಬೇಕು. ಕರಾವಳಿಯ 19 ಕ್ಷೇತ್ರಗಳ ಪೈಕಿ, ಬಿಜೆಪಿ 14 , ಕಾಂಗ್ರೆಸ 5 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.
ಕರಾವಳಿ ಕರ್ನಾಟಕ (19)
ಕರ್ನಾಟಕ ಟಿವಿ ಜನವರಿ ಟ್ರೆಂಡ್
ಬಿಜೆಪಿ – 14
ಕಾಂಗ್ರೆಸ್ – 05
ಜೆಡಿಎಸ್ – 00
—
ಹಳೇ ಮೈಸೂರು ಕರ್ನಾಟಕ
ಕರ್ನಾಟಕದಲ್ಲಿ ಅತೀ ಹೆಚ್ಚು ಕ್ಷೇತ್ರ ಹಾಗೂ ನಿರ್ಣಯಕ ಅಂದ್ರೆ ಅದು ಹಳೇ ಮೈಸೂರು ಭಾಗ. ಬೆಂಗಳೂರು ಹೊರತುಪಡಿಸಿ, 10 ಜಿಲ್ಲೆಗಳು ಹಳೇ ಮೈಸೂರು ಭಾಗಕ್ಕೆ ಬರುತ್ವೆ. ಇದರಲ್ಲಿ 61 ವಿಧಾನಸಭಾ ಕ್ಷೇತ್ರಗಳಿವೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ಮೈಸೂರು, ಮಡಿಕೇರಿ, ಚಾಮರಾಜನಗರ ಜಿಲ್ಲೆಗಳು ಹಳೇ ಮೈಸೂರು ವ್ಯಾಪ್ತಿಗೆ ಬರುತ್ವೆ. 61 ಕ್ಷೇತ್ರಗಳ ಪೈಕಿ ಕರ್ನಾಟಕ ಟಿವಿ ಜನವರಿ ಟ್ರೆಂಡ್ ಪ್ರಕಾರ ಜೆಡಿಎಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಂಚರತ್ನ ಯಾತ್ರೆ ಒಂದ್ ಕಡೆಯಾದ್ರೆ, ಜೆಡಿಎಸ್ ಅಭ್ಯರ್ಥಿಗಳನ್ನ ಘೋಷಣೆ ಮಾಡಿರೋದು ಜೆಡಿಎಸ್ ಗೆ ಪ್ಲಸ್ ಆಗಿದೆ. 61 ಕ್ಷೇತ್ರಗಳ ಪೈಕಿ ಜೆಡಿಎಸ್ 30, ಕಾಂಗ್ರೆಸ್ 15, ಬಿಜೆಪಿ 14, ಇಬ್ಬರು ಪಕ್ಷೇತರರು ಮುನ್ನಡೆಯನ್ನ ಪಡೆದುಕೊಂಡಿದ್ದಾರೆ.
ಹಳೇ ಮೈಸೂರು ಕರ್ನಾಟಕ (61)
ಕರ್ನಾಟಕ ಟಿವಿ ಜನವರಿ ಟ್ರೆಂಡ್
ಬಿಜೆಪಿ – 14
ಕಾಂಗ್ರೆಸ್ – 15
ಜೆಡಿಎಸ್ – 30
ಇತರೆ – 02
—-
ಬೆಂಗಳೂರು ನಗರ:
ಕರ್ನಾಟಕದ 224 ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಕ್ಷೇತ್ರ ಇರುವ ಬೆಂಗಳೂರು ನಗರ. ಬೆಂಗಳೂರು ನಗರದಲ್ಲಿ 28 ಕ್ಷೇತ್ರಗಳಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ನೇರ ಫೈಟ್ ಇದ್ರೂ, ಜೆಡಿಎಸ್ ಕೆಲವೊಂದು ಕ್ಷೇತ್ರಗಳಲ್ಲಿ ನಿರ್ಣಯಕ ಪಾತ್ರ ವಹಿಸುತ್ತೆ. ಈಗ ಆಪ್ ಪಕ್ಷ ನಗರದಲ್ಲಿ ಹೆಚ್ಚು ಸಕ್ರಿಯ ಆಗಿರೋದ್ರಿಂದ ಆಪ್ ಯಾರಿಗೆ ಆಪ್ ಇಡುತ್ತೆ ಅನ್ನೋದೇ ಸಸ್ಪೆನ್ಸ್. ಗುಜರಾತ್ ನಲ್ಲಿ ಕಾಂಗ್ರೆಸ್ ನ 35 ಅಭ್ಯರ್ಥಿಗಳ ಸೋಲಿಗೆ ಆಪ್ ಅಂದ್ರೆ ಆಮ್ ಆದ್ಮಿ ಪಕ್ಷ ಕಾರಣವಾಗಿತ್ತು. ಆದೇ ರೀತಿಯ ಇಂಪ್ಯಾಕ್ಟ್ ಕರ್ನಾಟಕದಲ್ಲೂ ಆದ್ರೆ, ಕಾಂಗ್ರೆಸ್ ಗೆ ಕಷ್ಟ ಕಷ್ಟ. ಆದ್ರೆ, ಸದ್ಯ ಆ ಮಟ್ಟಕ್ಕೆ ಕೇವಲ ಕಾಂಗ್ರೆಸ್ ಗೆ ಆಪ್ ಇಂಪ್ಯಾಕ್ಟ್ ಮಾಡುತ್ತೆ ಅನ್ನುವಂತಿಲ್ಲ. ಕೆಲವೊಂದು ಕ್ಷೇತ್ರಗಳಲ್ಲಿ ಬಿಜೆಪಿಗೂ ಆಮ್ ಆದ್ಮಿ ಪಕ್ಷ ಹಿನ್ನಡೆ ಮಾಡಬಹುದು. ಅಭ್ಯರ್ಥಿಗಳ ಮೇಲೆ ಅದು ಡಿಪೆಂಡ್ ಆಗುತ್ತೆ.
ಬೆಂಗಳೂರಿನ 28 ಕ್ಷೇತ್ರಗಳ ಕರ್ನಾಟಕ ಟಿವಿಯ ಜನವರಿ ಟ್ರೆಂಡ್ ಗಮನಿಸಿದ್ರೆ, ಬಿಜೆಪಿ 13, ಕಾಂಗ್ರೆಸ 12, ಜೆಡಿಎಸ್ 2, ಆಪ್ 1 ಕ್ಷೇತ್ರಗಳಲ್ಲಿ ಸದ್ಯಕ್ಕೆ ಮುನ್ನಡೆ ಕಾಯ್ದುಕೊಂಡಿದೆ.
ಒಟ್ಟಿನಲ್ಲಿ ಕರ್ನಾಟಕ ಟಿವಿಯ ಜನವರಿ ಸರ್ವೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ. ಕರ್ನಾಟಕ ವಿಧಾನಸಭೆ ಅತಂತ್ರ ಆಗಬಹುದು. ಆದ್ರೆ, ಮೂರು ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಫೈನಲ್ ಆದ್ಮೇಲೆ, ಸಾಕಷ್ಟು ಬದಲಾವಣೆ ನಿರೀಕ್ಷೆ ಮಾಡಬಹುದು. ಇದೇ ಫೈನಲ್ ಅಲ್ಲ. ಕರ್ನಾಟಕ ಟಿವಿ ಮತ್ತೆ ಫೆಬ್ರವರಿಗೂ ಟ್ರೆಂಡ್ ನೀಡಲಿದೆ. ಅಷ್ಟೊತ್ತಿಗಾಗಲೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಪ್ರಕಟ ಮಾಡಲಿದೆ. ಹೀಗಾಗಿ, ಫೆಬ್ರವರಿ ಟ್ರೆಂಡ್ ಸಾಕಷ್ಟು ಕುತೂಹಲವನ್ನ ಮೂಡಿಸಿದೆ.
ಕರ್ನಾಟಕ ಟಿವಿ, ಬೆಂಗಳೂರು
https://www.youtube.com/watch?v=khR8JjFL9Gg
ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗೌರವ ಸಮರ್ಪಣೆ