Sunday, October 5, 2025

Latest Posts

ದಳಪತಿ 67 ಚಿತ್ರಕ್ಕೆ ಲೋಕೇಶ್‌ ಕನಗರಾಜ್‌ ನಿರ್ದೇಶನ..!

- Advertisement -

Film News:
ಮಾಸ್ಟರ್‌ ಮತ್ತು ವರಿಸು ಸಿನಿಮಾದ ಬಳಿಕ ಮೂರನೇ ಸಲ ದಳಪತಿ ವಿಜಯ್‌ ಜತೆ ಕೈ ಜೋಡಿಸುತ್ತಿದೆ 7 ಸ್ಕ್ರೀನ್‌ ಸ್ಟುಡಿಯೋಸ್‌ ಬ್ಯಾನರ್‌. ಸದ್ಯಕ್ಕೆ ದಳಪತಿ 67 ಎಂದು ತಾತ್ಕಾಲಿಕ ಶೀರ್ಷಿಕೆಯಡಿ ಘೋಷಣೆ ಆಗಿರುವ ಈ ಚಿತ್ರವನ್ನು ಲೋಕೇಶ್‌ ಕನಗರಾಜ್‌ ನಿರ್ದೇಶನ ಮಾಡಲಿದ್ದಾರೆ.
ಈ ಹಿಂದೆ ವಿಜಯ್‌ಗೆ ಮಾಸ್ಟರ್‌ ಸಿನಿಮಾ ನಿರ್ದೇಶನ ಮಾಡಿದ್ದ ಲೋಕೇಶ್‌ಗೆ ಇದು ವಿಜಯ್‌ ಜತೆ ಎರಡನೇ ಪ್ರಾಜೆಕ್ಟ್‌. ಈ ಮೂಲಕ ಮಾಸ್ಟರ್‌ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ಸಿದ್ಧವಾಗಿದೆ. ಈಗಾಗಲೇ ಜ 2ರಿಂದ ಶೂಟಿಂಗ್‌ ಶುರುವಾಗಿದೆ.
ಕೈದಿ, ಮಾಸ್ಟರ್‌ ಮತ್ತು ಬೀಸ್ಟ್‌ ಸಿನಿಮಾಗಳಿಗೆ ಸಂಗೀತ ನೀಡಿದ್ದ ರಾಕ್‌ಸ್ಟಾರ್‌ ಅನಿರುದ್ಧ ರವಿಚಂದ್ರನ್‌ ದಳಪತಿ 67ಕ್ಕೂ ಸಂಗೀತ ನೀಡಲಿದ್ದು, ನಾಲ್ಕನೇ ಬಾರಿ ವಿಜಯ್‌ ಜತೆ ಕೈ ಜೋಡಿಸಿದ್ದಾರೆ.
ಇನ್ನುಳಿದಂತೆ ಮನೋಜ್‌ ಪರಮಹಂಸ ಛಾಯಾಗ್ರಹಣ, ಅನ್ಬರವೀ ಸಾಹಸ, ಫಿಲೋಮಿನ್‌ ರಾಜ್‌ ಸಂಕಲನ, ಸತೀಸ್‌ ಕುಮಾರ್‌ ಕಲೆ, ದಿನೇಶ್‌ ನೃತ್ಯ ನಿರ್ದೇಶನ, ಸಂಭಾಷಣೆ ಲೋಕೇಶ್‌ ಕನಗರಾಜ್‌, ರತ್ನ ಕುಮಾರ್‌, ಧೀರಜ್‌ ವೈದ್ಯ, ರಾಮಕುಮಾರ್‌ ಬಾಲಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

“ರೂಪಾಯಿ” ಚಿತ್ರದಲ್ಲಿ ಬಂತು “ಖಾರಾಬಾತ್” ಹಾಡು..!

ಕೆ.ಸಿ.ಸಿ. ಆಟಗಾರರ ಲಿಸ್ಟ್ ? ಯಾವ ತಂಡಕ್ಕೆ ಯಾರು ?

ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ .. ವಿಷ್ಣು ಫ್ಯಾನ್ಸ್ ಆಕ್ರೋಶ

- Advertisement -

Latest Posts

Don't Miss