ಕರ್ನಾಟಕ ಟಿವಿ : ಸರ್ಕಾರ ರಚನೆಯಾದ ಒಂದು ತಿಂಗಳಿನಿಂದ ರಾಜ್ಯ ಬಿಜೆಪಿ ಸರ್ಕಾರ ಗದ್ದಲ ಗಲಾಟೆಯಲ್ಲೇ ಮುಳುಗಿದೆ. ಸರ್ಕಾರ ರಚನೆಯಾದ ಒಂದು ತಿಂಗಳ ನಂತರ ರಚನೆಯಾಗಿದ್ದ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಸಿ.ಟಿ ರವಿ ಇದೀಗ ಖಾತೆ ವಿಚಾರದಲ್ಲಿ ಅಸಮಾಧಾನಗೊಂಡು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಪ್ರವಾಸೋದ್ಯಮ ಖಾತೆ ಬಗ್ಗೆ ರವಿ ಅಸಮಾಧಾನ
ಕಳೆದ ವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಯಡಿಯೂರಪ್ಪ ಸಚಿವರಿಗೆ ಖಾತೆ ಹಂಚಿರಲಿಲ್ಲ. ಇಂದು ಅಳೆದು ತೂಗಿ ಹೈಕಮಾಂಡ್ ನಿರ್ದೇಶನದಂತೆ ಖಾತೆ ಹಂಚಿಕೆ ಮಾಡಲಾಗಿದೆ. ಸಿ.ಟಿ ರವಿಗೆ ಪ್ರವಾಸೋದ್ಯಮ ಸಚಿವ ಸ್ಥಾನ ಸಿಕ್ಕಿದೆ. ಆದ್ರೆ ದೊಡ್ಡ ಗಿಫ್ಟ್ ಸಿಗುತ್ತೆ ಅಂತ ನಿರೀಕ್ಷೆ ಮಾಡಿದ್ದ ಸಿಟಿ ರವಿಗೆ ಪ್ರವಾಸೋದ್ಯಮ ಖಾತೆ ನೀಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ. ಇದೀಗ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಆದ್ರೆ ಬಿಜೆಪಿ ಹೈಕಮಾಂಡ್ ನಿರ್ಧಾರ ವಿರೋಧಿಸಿ ರಾಜೀನಾಮೆ ನೀಡಿದ್ರೆ ಸಿ.ಟಿ ರವಿ ಮುಂದೆ ಭಾರೀ ಬೆಲೆ ತೆರಬೇಕಾಗಬಹುದು.