ಪ್ರತಿವರ್ಷದಂತೆ ಈ ವರ್ಷವು ಸಹ ಪ್ರಪಂಚದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಡಿತ್ತು. ಭಾರತದ ಗೌತಮ್ ಅದಾಸಿಯವರು ಪ್ರಪಂಚದ ೧೦ ಶ್ರೀ ಮಮತರ ಪಟ್ಟಿಯಲ್ಲಿ ೩ ನೆಯವರಾಗಿ ಹೊರಹೊಮ್ಮಿದ್ದರು .ಆದರೆ ಹಿಂದನರ ಬರ್ಗ ಪತ್ರಿಕೆ ವರದಿಯು ಹೊರ ಬೀಳುತಿದ್ದಂತೆ ಶೇರುಗಳಲ್ಲಿ ದೊಡ್ಡ್ ಪ್ರಮಣದಇಳಿಕೆ ಕಂಡಿದ್ದು ಈಗ ಅವರ ಸಾಮ್ರಾಜ್ಯ ಪತನವಾಗಿ ಹೋಗಿದೆ ಟಾಪ್ ೩ರ ಪಟ್ಟಿಯಲ್ಲಿದ್ದ ಅದಾನಿಯವರು ೧೧ಕ್ಕೆ ಇಳಿದಿದ್ದರೆ.
ವಿಶ್ವದ ಅಗ್ರ ಶ್ರೀಮಂತರದಲ್ಲಿ ಒಬ್ಬರಾಗಿದ್ದ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ತನ್ನ ಯಥೇಚ್ಛ ಸಂಪತ್ತನ್ನು ಕಳೆದುಕೊಂಡ ಬಳಿಕ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಕೆಳಗಿಳಿದಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅದಾನಿ 11ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.
ಅಮೆರಿಕಾದ ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಹೊರಬಿದ್ದ ಬಳಿಕ ಅದಾನಿ ಕಂಪನಿಯ ಷೇರುಗಳು ಸತತ ಕುಸಿಯಲಾರಂಭಿಸಿತು. ಪರಿಣಾಮ ಭಾರತದ ಹಿರಿಯ ಉದ್ಯಮಿ ಗೌತಮ್ ಅದಾನಿ ಸಂಪತ್ತಿನಲ್ಲಿ ಶೀಘ್ರ ಇಳಿಕೆ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಅದಾನಿ ಷೇರುಗಳು ತೀವ್ರ ಕುಸಿತ ಕಂಡಿವೆ. ಸಮೂಹದ ಹಲವು ಷೇರುಗಳಲ್ಲಿ ಭಾರಿ ಮಾರಾಟ ಕಂಡು ಬರುತ್ತಿದ್ದು, ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಕೇವಲ ಒಂದು ವಾರದಲ್ಲಿ, ಅದಾನಿ ಗ್ರೂಪ್‌ನ ಒಟ್ಟು ಆಸ್ತಿ $ 84.4 ಶತಕೋಟಿಗೆ ಇಳಿಕೆ ಕಂಡಿದೆ. ಇಂಡೆಕ್ಸ್ ವರದಿ ಪ್ರಕಾರ ಮೂರು ಟ್ರೇಡಿಂಗ್ ವಹಿವಾಟುಗಳಲ್ಲಿ ಅದಾನಿ ಸಂಪತ್ತು ಬರೋಬ್ಬರಿ $34 ಬಿಲಿಯನ್ ನಷ್ಟಗೊಂಡಿದೆ.
ಇದರಿಂದಾಗಿ ಮಾರುಕಟ್ಟೆಯಲ್ಲಿ ಕಂಪನಿ ಲಕ್ಷಾಂತರ ಕೋಟಿ ರೂ. ಕಳೆದುಕೊಂಡಿತು. ಅದಾನಿ ಗ್ರೂಪ್ ಷೇರುಗಳಲ್ಲಿ ಭಾರಿ ಕುಸಿತದ ನಂತರ ಗೌತಮ್ ಅದಾನಿ ಈಗ ವಿಶ್ವದ ಹತ್ತು ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ.
ಬಜೆಟ್ ನ ಯಾವುದೇ ಯೋಜನೆ ಅನುಷ್ಠಾನಕ್ಕೆ ಬರುವುದಿಲ್ಲ..!: ಸಿದ್ದರಾಮಯ್ಯ