Saturday, April 19, 2025

Latest Posts

ರೋಣ ವಿಧಾನಸಭಾ ಎಲೆಕ್ಷನ್; ದೊಡ್ಡಯ್ಯ ಭರ್ಜರಿ ಪ್ರಚಾರ!

- Advertisement -

Political news

ಬೆಂಗಳೂರು(ಫೆ.13): ರೋಣ ವಿಧಾನಸಭೆಯಲ್ಲಿ ಎಲೆಕ್ಷನ್ ಹವಾ ಜೋರಾಗಿ ನಡೀತಿದೆ. ವಿಶೇಷವಾಗಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆಗಿರೋ ಆನೇಕಲ್ ದೊಡ್ಡಯ್ಯ ಭರ್ಜರಿಯಾಗಿ ಪ್ರಚಾರ ಮಾಡ್ತಿದ್ದಾರೆ. ಸಾಮೂಹಿಕ ವಿವಾಹ, ಶಾಲಾ ಕಲಿಕಾ ಹಬ್ಬದಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಎಲ್ಲರಿಗೂ ಮಾದರಿ ಆಗ್ತಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ರಂಗೇರ್ತಿದೆ. ಇನ್ನೂ ಎಲೆಕ್ಷನ್ ಘೋಷಣೆ ಆಗದಿದ್ರೂ, ಈಗಾಗ್ಲೇ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಆಮ್ ಆದ್ಮಿ ಪಕ್ಷ ಹಾಗೂ ಅಭ್ಯರ್ಥಿಗಳು ವಿಶೇಷ, ವಿಭಿನ್ನ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಗದಗ ಜಿಲ್ಲೆ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ ಹಲವು ಕಾರ್ಯಕ್ರಮಗಳನ್ನ ವಿಶೇಷವಾಗಿ ಆಯೋಜನೆ ಮಾಡ್ತಿದ್ದಾರೆ. ಇತ್ತೀಚೆಗಷ್ಟೇ, ರೋಣ ವಿಧಾನಸಭಾ ಕ್ಷೇತ್ರದ ಕೋಟುಮಚಗಿ ಗ್ರಾಮದ ಶಾಲೆಯಲ್ಲಿ ಕಲಿಕಾ ಹಬ್ಬ ನಡೀತು. ಈ ವೇಳೆ ಶಾಲಾ ಮಕ್ಕಳಿಗೆ ಬ್ಯಾಗಳನ್ನ ಆನೇಕಲ್ ದೊಡ್ಡಯ್ಯ ಕೊಡುಗೆಯಾಗಿ ನೀಡಿದರು.

ಇನ್ನು ರೋಣದ ಕುಂಟೋಜಿ, ಕಾರಡಗಿಮಠದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೀತು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ರೋಣ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ, ನವ ದಂಪತಿಗಳಿಗೆ ಶುಭ ಹಾರೈಸಿದರು. ಇತ್ತೀಚೆಗಷ್ಟೇ, ಕನಕ ಗುರು ಪೀಠ ಉಪಶಾಖಾ ಮಠ, ಬಾದಿಮನಾಳ ಮಠ ದಲ್ಲಿ ಸಾಮೂಹಿಕ ವಿವಾಹ ಹಾಗೂ ಕನಕದಾಸ ಜಯಂತಿಯಲ್ಲಿ ಆನೇಕಲ್ ದೊಡ್ಡಯ್ಯ ಭಾಗಿಯಾದರು. ಒಟ್ನಲ್ಲಿ, ರೋಣದಲ್ಲಿ ಆಪ್​ ಪಕ್ಷದ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ, ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದ್ದಾರೆ.

- Advertisement -

Latest Posts

Don't Miss