state news
ಬೆಂಗಳೂರು(ಫೆ.15): ರಾಜ್ಯದ ಬಹುತೇಕ ಭಾಗಗಳಲ್ಲಿ ಈಗಾಗಲೇ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿರುವುದು ಸುದ್ದಿಯಾಗುತ್ತಿದೆ, ಇದೀಗ ದಕ್ಷಿಣ ಭಾರತದ ಒಟ್ಟು 40 ಕಡೆಗಳಲ್ಲಿ ಎನ್ ಐ ಎ ದಾಳಿಯನ್ನು ನಡೆಸಿರುವುದು ಬೆಳಕಿಗೆ ಬಂದಿದೆ. ಬಹುತೇಕ ತಮಿಳುನಾಡು,ಕೇರಳ ಕಡೆಗಳಲ್ಲಿ ಈ ದಾಳಿ ನಡೆದಿದೆ.
40 ಪ್ರದೇಶಗಳ ಮೇಲೆ ಏಕಕಾಲಕ್ಕೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೇರಳದ ಪಲ್ಲಕಡನಲ್ಲಿ ದಾಳಿ ನಡೆಸಿದೆ. ತಮಿಳುನಾಡಿನ ಕೊಯಮುತ್ತೂರನ ಕೊಟ್ಟಯ್ ಈಶ್ವರನ್ ದೇವಸ್ಥಾನ ಎದುರುಗಡೆ ಸ್ಪೋಟಗೊಂಡ ಕಾರ್ ಬ್ಲಾಸ್ಟ್ನಲ್ಲಿ ಜಮೀಶ್ ಮುಬೀನ್ ಎಂಬುವನು ಸಾವನ್ನಪ್ಪಿದ್ದನು.
ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಜೊತೆ ಜಮೀಶ್ ಮುಬೀನ್ ನಂಟು ಹೊಂದಿದ್ದು. ಈತ ಆತ್ಮಾಹುತಿ ಬಾಂಬ್ಗೆ ಧಾರ್ಮಿಕ ಕೇಂದ್ರಗಳು ಮತ್ತು ಸ್ಮಾರಕಗಳನ್ನು ಟಾರ್ಗೆಟ್ ಮಾಡಿದ್ದನು ಎಂದು ಎನ್‌ಐಎ ಹೇಳಿದೆ. ಮಂಗಳೂರಿನಲ್ಲಿ ನಡೆದ ಆಟೋ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಆಟೋ ಚಾಲಕ ಮತ್ತು ಆರೋಪಿ ಮೊಹ್ಮದ್ ಶಾರಿಕ್ ಇಬ್ಬರು ಗಾಯಗೊಂಡಿದ್ದರು. ಸ್ಫೋಟ ಪ್ರಕರಣದ ತನಿಖೆಯ ಸಂದರ್ಭದಲ್ಲಿ, ಶಾರಿಕ್ ಮತ್ತು ಆತನ ಸಹಚರರು ಕರ್ನಾಟಕದ ಅರಣ್ಯಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಕ್ಯಾಂಪ್ ಸ್ಥಾಪಿಸಲು ಬಯಸಿದ್ದರು ಎಂದು ಎನ್ಐಎಗೆ ತಿಳಿದುಬಂದಿದೆ.

