Friday, November 28, 2025

Latest Posts

ಡಿ ಬಾಸ್ ಬರ್ತಡೇ ಸ್ಪೆಷಲ್..!

- Advertisement -

ಡಿ ಬಾಸ್ ಬರ್ತಡೇ ಸ್ಪೆಷಲ್

ದರ್ಶನ್ 46ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳು ಕಳೆದ ಒಂದು ವಾರದಿಂದಲೇ ಸಂಭ್ರಮಿಸುತ್ತಿದ್ದಾರೆ. ಈ ಬಾರಿ ದರ್ಶನ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.ಡಿ ಬಾಸ್ ಫ್ಯಾನ್ಸ್ ಮನೆ ಮುಂದೆ ಜಾಮಾಯಿಸಿ ಬಿಡುತ್ತಾರೆ. ರಸ್ತೆಯುದ್ದಕ್ಕೂ ಎಲ್ಲಿ ನೋಡಿದರೂ ಅಭಿಮಾನಿಗಳೇ ಎದ್ದು ಕಾಣುತ್ತಾರೆ.

ತಮ್ಮ ನೆಚ್ಚಿನ ನಟನಿಗಾಗಿ ಅಭಿಮಾನಿಗಳು ವಿಭಿನ್ನವಾದ ಕೇಕ್‌ಗಳನ್ನು ತರುತ್ತಿದ್ದರು. ಹಾರಗಳನ್ನು ತಂದು ಸಂಭ್ರಮಿಸುತ್ತಿದ್ದರು. ಆದರೆ, ಸ್ವತ: ದರ್ಶನ್ ತಮ್ಮ ಅಭಿಮಾನಿಗಳಿಗೆ ಇದ್ಯಾವುದೂ ಬೇಡ ಅನ್ನೋ ಸಂದೇಶವನ್ನು ಅಭಿಮಾನಿಗಳಿಗೆ ನೀಡಿದ್ದರು. ಈ ಕಾರಣಕ್ಕಾಗಿ ದರ್ಶನ್ ಫ್ಯಾನ್ಸ್ ಅವರ ಮನೆಗೆ ದವಸ ಧಾನ್ಯಗಳನ್ನು ತಂದು ಹಾಕುತ್ತಿದ್ದಾರೆ. ಈ ದವಸ ಧಾನ್ಯಗಳನ್ನು ಅನಾಥ ಆಶ್ರಮಕ್ಕೆ ನೀಡಲು ದರ್ಶನ್ ತೀರ್ಮಾನಿಸಿದ್ದಾರೆ.

ಕ್ರಾಂತಿ’ ಸಿನಿಮಾ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ 56ನೇ ಸಿನಿಮಾ ಮೇಲೆ ಫ್ಯಾನ್ಸ್ ಕಣ್ಣಿಟ್ಟಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸುತ್ತಿರುವ 56ನೇ ಸಿನಿಮಾ ಟೈಟಲ್‌ಗಾಗಿ ಎದುರು ನೋಡುತ್ತಿದ್ದಾರೆ. ಫೆಬ್ರವರಿ 16ರ ಮಧ್ಯರಾತ್ರಿ 12 ಗಂಟೆಗೆ ಟೈಟಲ್ ರಿವೀಲ್ ಆಗುತ್ತಿದೆ. ಶೀರ್ಷಿಕೆ ಅನಾವರಣ ಆಗುತ್ತಿದ್ದಂತೆ ಅಭಿಮಾನಿಗಳು ರಾತ್ರಿಯಿಂದ ಸೋಶಿಯಲ್ ಮೀಡಿಯಾದಲ್ಲಿ ರೀಚ್ ಮಾಡಿಸುವುದಕ್ಕೆ ಬೇಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

- Advertisement -

Latest Posts

Don't Miss