political news
ಬೆಂಗಳೂರು(ಫೆ.16): ಈಗಾಗಲೇ ವಿಧಾನಸಭೆ ಚುನಾವಣೆಯ ದಿನಗಳು ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ, ಸಿಎಂ ಬಸವರಾಜ ಬೊಮ್ಮಾಯಿ ಅವರ ಸಿಎಂ ಅವಧಿ ಇನ್ನು ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಬೇರೆ ಪಕ್ಷಗಳಲ್ಲಿ ಸಿಎಂ ಸ್ಥಾನದ ಕುರಿತಾಗಿ ಚರ್ಚೆಗಳು ಈಗಾಗಲೇ ಶುರುವಾಗಿದ್ದು, ಪಕ್ಷಗಳಲ್ಲಿ ಗೊಂದಲಗಳು ಮನೆಮಾಡಿದೆ.
ಈ ಕುರಿತು ತುಮಕೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಡಿಸಿಎಂ, ಪರಮೇಶ್ವರ್, ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಹೈ ಕಮಾಂಡ್ ತೀರ್ಮಾನಿಸಿದ್ದನ್ನು ಗೌರವಿಸುತ್ತೇವೆ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಕಾಂಗ್ರೆಸ್ ನಲ್ಲಿ ಜಾತಿ ಆಧಾರದ ಮೇಲೆ ಸಿಎಂ ಮಾಡಲ್ಲ. ನಮ್ಮಲ್ಲಿ 10 ಜನರಿಗೆ ಸಿಎಂ ಆಗುವ ಆಸೆಯಿದೆ. ಅದರಲ್ಲಿ ನಾನೂ ಒಬ್ಬನಾಗಿದ್ದೇನೆ ಎಂದು ತುಮಕೂರಿನಲ್ಲಿ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಮಾತನಾಡಿದರು. ಇದೀಗ ಕಾಂಗ್ರೆಸ್ ನಲ್ಲಿ ಮತ್ತೆ ಕುರ್ಚಿ ಫೈಟ್ ಶುರುವಾಗಿದೆ.
ಶಿವರಾತ್ರಿ ಪಾದಯಾತ್ರಿಗಳಿಗೆ ದಾಸೋಹ ವ್ಯವಸ್ಥೆ ಕಲ್ಪಿಸಿದ ಸಾಲುಮರದ ತಿಮ್ಮಕ್ಕ..!