ಮಂಡ್ಯದಲ್ಲಿ ಶುರುವಾಯ್ತು ಪೋಸ್ಟರ್ ಅಭಿಯಾನ…!

state news

ಮಂಡ್ಯ(ಫೆ.20): ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಮತ್ತೊಮ್ಮೆ ಪೋಸ್ಟರ್ ಅಭಿಯಾನ ನಡೆಸಿದೆ.
ಬಜೆಟ್ ಮಂಡನೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಇಂದು ಮಂಡ್ಯದ ಡಿಸಿ ಪಾರ್ಕ್ ಆವರಣದ ಕಾಂಪೌಂಡ್ ಗೋಡೆ ಮೇಲೆ ಬಿಜೆಪಿ ಅಂಟಿಸಿರುವ ಪೋಸ್ಟರ್ಗಳ ಮೇಲೆ ಇಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯು ಸಿ ಶಿವಕುಮಾರ್ ನೇತೃತ್ವದಲ್ಲಿ ಪೋಸ್ಟರ್ ಅಂಟಿಸಿದರು. ಬಿಜೆಪಿಯೇ ಭರವಸೆ ಎಂದು ಪೋಸ್ಟರ್ ಗಳ ಮೂಲಕ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಪೋಸ್ಟರ್ ನಲ್ಲಿ ಮಂಡ್ಯದ ಮೂಲೆ ಮೂಲೆಗಳಲ್ಲಿ ಪೋಸ್ಟರ್ ಅನ್ನು ಬಿಜೆಪಿಯ ಕಾರ್ಯಕರ್ತರು ಮತ್ತು ಬೆಂಬಲಿಗರು ಅಂಟಿಸಿದ್ದರು.

ಅದಕ್ಕೆ ವಿರುದ್ಧವಾಗಿ ಇಂದು ಕಾಂಗ್ರೆಸ್ ಕಾರ್ಯಕರ್ತರೂ ಮತ್ತು ಬೆಂಬಲಿಗರು ಅವರ ಪೋಸ್ಟರ್ ಮೇಲೆ ಪೋಸ್ಟರ್ ಅಂಟಿಸುವುದರ ಮೂಲಕ ಮತ್ತೊಮ್ಮೆ ಪೋಸ್ಟರ್ ಅಭಿಯಾನ ವನ್ನು ಶುರುಮಾಡಿದ್ದಾರೆ. ಮೊದಲು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಪೋಸ್ಟರ್ ಅಂಟಿಸಿದ್ದರೂ, ಇಂದು ಸಾಕಪ್ಪಾ ಸಾಕು ಕಿವಿ ಮೇಲೆ ಹೂವ ಎಂಬುವ ಪೋಸ್ಟರ್ಗಳನ್ನು ಅಂಟಿಸಿದರು.

ಬಿ. ಎಸ್ . ಯಡಿಯೂರಪ್ಪಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅದ್ಧೂರಿ ಸ್ವಾಗತ…!

ದತ್ತಿ ಪ್ರಶಸ್ತಿಗೆ 53 ಕೃತಿಗಳ ಆಯ್ಕೆ !

About The Author