ಭದ್ರಾವತಿ(ಫೆ.21): ರಾಜ್ಯದಲ್ಲಿ ಈಗಾಗಲೇ ಪಂಚರತ್ನ ರಥಯಾತ್ರೆ ಅತ್ಯಂತ ಅದ್ಧೂರಿಯಾಗಿ ಸಾಗುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆ ಇಂದು ಭದ್ರಾವತಿಗೆ ತಲುಪಿದ್ದು, 69 ನೇ ದಿನದ ಪಂಚರತ್ನ ಯಾತ್ರೆಗೆ ಸಾಕ್ಷಿಯಾಯಿತು.
ಭದ್ರಾವತಿ ಕ್ಷೇತ್ರದಲ್ಲಿ ದಳಪತಿ ಸಂಚಾರ ನಡೆಸಿದರು. ಇಲ್ಲಿನ ಯಾಕಾರೆಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್ ಡಿ ಕೆಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಬೃಹತ್ ಗುಲಾಬಿ, ಮಲ್ಲಿಗೆ ಹಾರ ಹಾಕಿ ದಳಪತಿಗೆ ಗ್ರಾಮಸ್ಥರು ಸನ್ಮಾನ ಮಾಡಿದರು. ಇನ್ನು ಕಾರೆಹಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ರೋಡ್ ಶೋ ಕೂಡ ನಡೆಯಿತು.
ಸಾಕಷ್ಟು ಜನ ಸಾಗರವೇ ಭದ್ರಾವತಿಯಲ್ಲಿ ಸೇರಿದೆ. ರಸ್ತೆಯ ಇಕ್ಕೆಳಗಳಲ್ಲಿ ನಿಂತು ಜನರು ರಥಯಾತ್ರೆ ವೀಕ್ಷಿಸಿದರು. ಭದ್ರಾವತಿಯಲ್ಲಿ ಎಲ್ಲೆಲ್ಲೋ ಜೆಡಿಎಸ್ ಪಕ್ಷದ ಪ್ಲ್ಯಾಗ್ ರಾರಾಜಿಸುತ್ತಿದ್ದು, ಮಾಜಿ ಸಿಎಂ ಗ್ರಾಮವಾಸ್ತವ್ಯ ಮಾಡಿ, ಅಹವಾಲು ಸ್ವೀಕಾರ ಮಾಡುತ್ತಾರೆ. ಇನ್ನು ಈ ಯಾತ್ರೆಯೂ ರಾಜ್ಯದ ಮೂಲೆ ಮೂಲೆಗೂ ಸಾಗಲಿದೆ. ಇದು ವಿವಿಧ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಆಕಾಂಕ್ಷೆಗಳನ್ನು ಹೊಂದಿದೆ.