State News:
Feb:24: ಪ್ರಚಾರದ ದಿನವಾದ ಎರಡನೇ ದಿನವೂ ಅಬ್ಬರದ ಪ್ರಚಾರಕೈಗೊಂಡಿರುವ ಜೆಡಿಎಸ್ ನಅಯಕರು ಕುಟುಂಬ ಸಮೇತ ಪವರಚಾರ ಮುಂದುವರೆಸಿದ್ದಾರೆ. ಮಾಜಿಸಚಿವ ಎಚ್.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣ ಹಾಸನ ವಿಧಾನಸಭಾ ವ್ಯಾಪ್ತಿಯ ನಿಟ್ಟೂರು ಗ್ರಾಮಕ್ಕೆ ಆಗಮಿಸಿದ ಎಚ್ಡಿಆರ್ ಹಾಗೂ ಭವಾನಿ ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಕೋರಿದರು . ಜೆಡಿಎಸ್ ಕಾರ್ಯಕರ್ತರು ಟಿಕೆಟ್ ಗೊಂದಲದ ನಡುವೆ ಪ್ರಚಾರ ಮುಂದುವರೆಸಿರುವ ಎಚ್.ಡಿ.ರೇವಣ್ಣ ಫ್ಯಾಮಿಲಿ ನಿಟ್ಟೂರು ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸ ನಂತರ ಪ್ರಚಾರದಲ್ಲಿ ನಿರತರಾದರು .ಪೋಷಕರಿಗೆ ಪುತ್ರ ಸಂಸದ ಪ್ರಜ್ವಲ್ರೇವಣ್ಣ ಸಾಥ್ ನೀಡಿದರು.
ಹಾಸನ ತಾಲ್ಲೂಕಿನ, ನಿಟ್ಟೂರು ಗ್ರಾಮದಲ್ಲಿ ನಡೆಯುತ್ತಿರುವ ಕಾರ್ಯಕರ್ತರ ಸಭೆಯಲ್ಲಿ ಮಾಜಿಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ. ಪಂಚಾಯತಿವಾರು ಎರಡು ದಿನ ಕಾರ್ಯಕರ್ತರ ಸಭೆ ಮಾಡುತ್ತಿದ್ದೇವೆ. ಕಳೆದ ಬಾರಿ ಜಡಿಎಸ್ ಅದಿಕಾರ ಕಳೆದುಕೊಂಡು ನಂತರ ಕಳೆದ ನಾಲ್ಕು ವರ್ಷ ನಮ್ಮ ಸರ್ಕಾರ ಹೋದ ಮೇಲೆ ನಮ್ಮ ಜನಕ್ಕೆ ನೋವು ಕೊಡ್ತಿದ್ದಾರೆ. ಹಾಗಾಗಿ ಈ ಬಾರಿ ನಅನೆ ಖದ್ದಾಜೆ ಪಂಚಾಯರಿವಾರುಪ್ರಚಾರ ಮಾಡಿ ಮತ್ತ ಅಧಿಕಾರಕ್ಕೆ ತರುತ್ತೇನೆ. ಅದಕ್ಕೆ ನಾನೇ ಖುದ್ದಾಗಿ ಪಂಚಾಯಿತಿಗಳಿಗೆ ಭೇಟಿ ನೀಡುತ್ತಿದ್ದೇನೆ . ಕುಮಾರಸ್ವಾಮಿ ಬಜೆಟ್ ಮಾಡುವಾಗ ಬಿಜೆಪಿ ಕೆಲವರು ಹಾಸನ, ಮಂಡ್ಯ, ಮೈಸೂರು ಬಜೆಟ್ ಅಂದ್ರು ಹಾಗಾಗಿ ನನ್ನ ಕ್ಷೇತ್ರದ ಜನರನ್ಉ ಊಳಿಸಬೇಕಿದೆ ನನ್ನ ಕಾರ್ಯಕರ್ತರನ್ನ ಸಹ ಉಳಿಸಬೇಕಿದೆ ಯಾರು ಎದೆಗುಂದಬೇಡಿ ನಿಮ್ಮ ಜೊತೆ ನಾನಿದ್ದೇನೆ ಹಾಗಾಗಿ ಎಲ್ಲರೂ ಧೈರ್ಯವಾಗಿರಿ ಎಂದು ಕಾರ್ಯಕರ್ತರಿಗೆ ದೈರ್ಯ ತುಂಬಿದರು.
ದೇವೇಗೌಡರು ಬದುಕ್ಕಿದ್ದಾಗಲೇ ನಮ್ಮ ಕಾರ್ಯಕರ್ತರಿಗೆ ನೋವು ಕೊಡುತ್ತಿದ್ದಾರೆ. ಇನ್ನ ಉಳಿದ ವಿಡಯದ ಬಗ್ಗೆ ಟಿಕೆಟ್ ಆದ ಆಮೇಲೆ ಮಾತಾಡೋಣ. ಈಭಾರಿಯ ಚುನಾವಣೆಯಲ್ಲಿ ಹೆಚ್ಚಿನ ಮಟ್ಟದ ಪೈಪೋಟಿ ಇದ್ದುಇದನ್ನು ಚಾಲೆಂಜ್ ಆಗಿ ತಗೊಂಡು ಹೋರಾಟ ಮಾಡಬೇಕಾಗುತ್ತದೆ. ಮಾತೆತ್ತಿದರೆ ಜೆಡಿಎಸ್ ನಲ್ಲಿ ಕುಟುಂಬ ರಾಜಕಾರಣ ಮಾಡುತಿದ್ದಾರೆ ಎನ್ನುತ್ತಾರಲ್ಲಿ ಬಿಜೆಪಿ, ಕಾಂಗ್ರೆಸ್ನಲ್ಲಿ ಕುಟುಂಬ ರಾಜಕಾರಣ ಇಲ್ವಾ ಎಂದು ಪ್ರಶ್ನೆ ಮಾಡಿದರು.
ಎರಡು ರಾಷ್ಟ್ರೀಯ ಪಕ್ಷಗಳು ನಿರ್ಣಯ ಮಾಡಲಿ ಕುಟುಂಬದಿಂದ ಒಬ್ಬರೇ ನಿಲ್ಲಲಿ ಎಂದು ಆಗ ನಾನೆ ಪ್ರಜ್ವಲ್, ಸೂರಜ್ ರಾಜೀನಾಮೆ ಕೊಡುಸ್ತಿನಿ ಎಂದು ಹೇಳಿಕೆ ನೀಡಿದರು.
ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ: ಸಿದ್ದರಾಮಯ್ಯ