state news
ಮಂಡ್ಯ(ಫೆ.25): ಇಂದಿನಿಂದ ದರ್ಶನ್ ಪುಟ್ಟಣ್ಣಯ್ಯ ಪಾದಯಾತ್ರೆ ನಡೆಸಲಿದ್ದಾರೆ. ರೈತ ಸಂಘವನ್ನ ಅಧಿಕಾರಕ್ಕೆ ತರಲು ರೈತರು ದಿ.ಕೆ.ಎಸ್.ಪುಟ್ಟಣ್ಣಯ್ಯ ಪುತ್ರ ಸಜ್ಜಾಗಿದ್ದಾರೆ. ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಜನಮನ ದರ್ಶನ ಇದು ಭರವಸೆಯ ಯಾನ ಹೆಸರಲ್ಲಿ ಪಾದಯಾತ್ರೆ ಮಂಡ್ಯ ತಾಲ್ಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಆರತಿ ಬೆಳಗಿ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲಿಸಿದ ಗ್ರಾಮಸ್ಥರು
ಕ್ರೇನ್ ಮೂಲಕ ಬೃಹತ್ ಬೆಲ್ಲದ ಹಾರ ಹಾಕಿ ಅಭಿನಂದನೆ. ಪಾದಯಾತ್ರೆ ಬೆಂಬಲಿಸಿ ಹೆಜ್ಜೆ ಹಾಕಿದ ಬಡಗಲಪುರ ನಾಗೇಂದ್ರ, ರಾಜ್ಯ ರೈತ ಸಂಘದ ಅಧ್ಯಕ್ಷ ಪಾದಯಾತ್ರೆ ಮೂಲಕ ಜನರ ಬಳಿಗೆ ತೆರಳಿ ಸಮಸ್ಯೆ ಆಲಿಸಲಿರುವ ಯುವ ರೈತ ನಾಯಕ ಚುನಾವಣೆ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜನರಿಗೆ ಅರಿವು ಮೂಡಿಸಿದರು. ಇಂದಿನಿಂದ 19 ದಿನಗಳ ಕಾಲ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಿದ ಬಳಿಕ ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ರೈತರ ಬಹಿರಂಗ ಸಮಾವೇಶ. ಸಮಾವೇಶದಲ್ಲಿ ಭಾಗಿಯಾಗಲಿರುವ ರಾಜ್ಯ ರೈತ ನಾಯಕರು, ಮುಖಂಡರು, ರೈತರ ಪರ ಕೆಲಸ ಮಾಡಲು ನಾವೇ ಗೆಲ್ಲಬೇಕು. ಈ ಸರ್ಕಾರಗಳು ರೈತರ ಪರವಲ್ಲದ ಸರ್ಕಾರ. ದರ್ಶನ್ ಪುಟ್ಟಣ್ಣಯ್ಯ ಗೆಲ್ಲಿಸಲು ಜನರ ಬಳಿ ತೆರಳಿ ಮನವಿ ಮಾಡಿದರು. ಪಾದಯಾತ್ರೆಯಲ್ಲಿ ಸುನೀತಾ ಪುಟ್ಟಣ್ಣಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಸೇರಿ ಹಲವರು ಭಾಗಿಯಾಗಿದ್ದರು.




