ಇಂದಿನಿಂದ ಬಿಜೆಪಿ ರಥಯಾತ್ರೆ ಶುರು !

state news

ಬೆಂಗಳೂರು(ಮಾ.1): ಇಂದಿನಿಂದ ಬಿಜೆಪಿ ರಥಯಾತ್ರೆ ಆರಂಭಿಸಿದ್ದು, ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಗೆ ಪೈಪೋಟಿ ನೀಡುವ ಹಾಗೆ ಬಿಜೆಪಿಯಿಂದ ಇಂದು ರಥಯಾತ್ರೆ ಶುರುವಾಗಿದೆ. ಪ್ರಮುಖ‌ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಲಿದ್ದಾರೆ.

ಮೈಸೂರು ಏರ್ ಪೋರ್ಟ್ ಗೆ ಬಂದಿಳಿದು, ಬಿಜೆಪಿ ಪಕ್ಷದ ನಾಯಕರು ಅದ್ಧೂರಿಯಾಗಿ ಬರಮಾಡಿಕೊಂಡರು.  ನಾಳೆ ಚಾಮರಾಜನಗರದಲ್ಲಿ ಎಂದರೆ ಮಾರ್ಚ್ 2 ರಂದು ನಗರದ ಆದಿಶಕ್ತಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ  ನಡೆಯಲಿದ್ದು ಮಧ್ಯಾಹ್ನ  ಗುಂಡ್ಲುಪೇಟೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ರಾಜ್ಯದಲ್ಲಿ 4 ತಂಡಗಳು ಯಾತ್ರೆ ನಡೆಸಲಿದ್ದು ಗಡಿಜಿಲ್ಲೆಯಲ್ಲೇ ಮೊದಲ ಯಾತ್ರೆ ನಡೆಯಲಿರುವುದು ವಿಶೇಷವಾಗಿದೆ.

ನಾವು ಸರಕಾರಕ್ಕೆ ಬಂದಮೇಲೆ 7ನೇ ವೇತನ ಆಯೋಗ  ಜಾರಿ ಮಾಡ್ತೇವೆ: ಡಿಕೆಶಿ

ಸರ್ಕಾರಿ ನೌಕರರ ಮುಷ್ಕರ; ಇಂದಿನ ಪರೀಕ್ಷೆಗಳು ಮುಂದೂಡಿಕೆ !

About The Author