Friday, November 22, 2024

Latest Posts

ಕಾಂಗ್ರೆಸ್ ಪಕ್ಷ ಖಂಡಿತ ಅಧಿಕಾರಕ್ಕೆ ಬಂದೇ ಬರುತ್ತೆ; ಡಿಕೆಶಿ

- Advertisement -

state news

ಹಾಸನ(ಮಾ.1): ಪ್ರಧಾನಿ ಮೋದಿ ಮಲ್ಲಿಕಾರ್ಜುನ ಖರ್ಗೆ ಗೆ ಡಬಲ್ ಸ್ಟಾಂಡ್ ಅಧ್ಯಕ್ಷರು ಅನ್ನುವ ರೀತಿಯಲ್ಲಿ ಬಿಂಬಿಸಿ ಬಹಳ ಅವಹೇಳನವಾಗಿ ಮಾತನಾಡಿದ್ದಾರೆ. ದೇಶದ ಇತಿಹಾಸ, ಮಹಾತ್ಮಗಾಂಧಿ, ಇಂಧಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ ಕುಳಿತ ಜಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಳಿತಿದ್ದಾರೆ.

ಎಐಸಿಸಿ ಅಧ್ಯಕ್ಷರಾಗಿ ಆಯ್ಕೆ‌ಯಾಗಿ ಕೆಲಸ‌ ನಿರ್ವಹಿಸುತ್ತಿದ್ದಾರೆ. ಒಬ್ಬ ಮುನ್ಸಿಪಲ್ ಸದಸ್ಯನಾಗಿ ಆಯ್ಕೆಯಾಗಿ 9 ಭಾರಿ ಶಾಸಕರು, 2 ಭಾರಿ ಸಂಸದರು ಮತ್ತು ರಾಜ್ಯಸಭಾ ಸದಸ್ಯರಾಗಿದ್ದಾರೆ. ಒಬ್ಬ ದಲಿತ, ರಾಷ್ಟ್ರೀಯ ನಾಯಕನ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ.

ಸ್ವತಂತ್ರವಾಗಿ ಕೆಲಸ ಮಾಡುತ್ತಿರುವ ಒಬ್ಬ ದಲಿತ ನಾಯಕ ಅವಹೇಳನಕಾರಿಯಾಗಿ ಮಾಡಿರುವುದು ಖಂಡನೀಯ, ಅಗೌರವ ತರುವಂತಹದ್ದು. ಬೆಲೆಗಳೆಲ್ಲಾ ಗಗನಕ್ಕೆ ಹೋಗಿದೆ. 7 ವೇತನ ಆಯೋಗಕ್ಕೆ ಸರ್ಕಾರಿ ನೌಕರರು ಅರ್ಹರಿದ್ದಾರೆ. ಬಿಜೆಪಿಯವರು ಮಾತು ಕೊಟ್ಟಿದ್ದರು, ಅದನ್ನು ನೆರವೇರಿಸುವಲ್ಲಿ ವಿಫಲರಾಗಿದ್ದಾರೆ. ನಾವು ಆ ನೌಕರರ ಪರವಾಗಿ ಸಹಮತವನ್ನು ವ್ಯಕ್ತಪಡಿಸುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷ ಖಂಡಿತ ಅಧಿಕಾರಕ್ಕೆ ಬರುತ್ತೆ, ಇದರಲ್ಲಿ ಯಾವುದೇ ಅನುಮಾನ ಬೇಡ. ಯಾರ ಬೆಂಬಲವಿಲ್ಲದೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ. ಈ‌ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ. ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರವಿದೆ. ನಮ್ಮ ಕಾಂಗ್ರೆಸ್ ಸರ್ಕಾರ 7 ವೇತನ ಆಯೋಗ ಜಾರಿ ಮಾಡುತ್ತೆ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಮೋದಿಯವರು ಯಡಿಯೂರಪ್ಪ ಅವರ ಮೇಲೆ ಬಹಳ ಪ್ರೀತಿಯಿಂದ‌ ಮಾತನಾಡಿದ್ದಾರೆ

ಇದುವರೆಗೂ ಬೊಮ್ಮಯಿ ಅವರ ನೇತೃತ್ವದಲ್ಲಿ ಎಲೆಕ್ಷನ್ ಅಂತಿದ್ರು. ಈಗ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಅಂತಿದ್ದಾರೆ. ಈಗ ಹೇಳಲಿ ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತೆ ಅಂತ ಯೂಸ್ ಅಂಡ್ ಥ್ರೋ ಬಿಜೆಪಿಯ ಮೂಲ ಧ್ಯೇಯ ಎಂದ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

‘ರವೀಂದ್ರ ಶ್ರೀಕಂಠಯ್ಯಗೆ ಮೈ ಎಲ್ಲಾ ದುರಂಕಾರ ತುಂಬಿದೆ; ಸುಮಲತಾ ಗುಡುಗು!

- Advertisement -

Latest Posts

Don't Miss