political news
ವಿಜಯ ಸಮಕಲ್ಪ ಯಾತ್ರೆಗೆ ಚಾಲನೆ ನೀಡುವುದರ ಸಲುವಾಗ ಬಿಜೆಪಿ ಯ ಜೆಪಿನಡ್ಡಾ ಅವರು ಮಹಾಮದೇಶ್ವರ ಬೆಟ್ಟಕ್ಕೆ ಆಗಮಿಸಿ ದೇವರಿಗೆ ಪೋಜೆ ಸಲ್ಲಿಸಿ ನಂತರ ಯಾತ್ರಗೆ ಚಾಲನೆ ನೀಡಿದರು
ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬುಧವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಲೆಮಹದೇಶ್ವರ ಬೆಟ್ಟದಂತಹ ಪುಣ್ಯ ಕ್ಷೇತ್ರದಲ್ಲಿ ಯಾತ್ರೆ ಪ್ರಾರಂಭವಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ನಿಶ್ಚಿತವಾಗಿ ಜಯ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಸಶಕ್ತೀಕರಣ ಆಗುತ್ತಿದೆ. ಮೋದಿ ಬಂದ ಮೇಲೆ ಸಬ್ ಕಾ ಸಾಥ್ ಸಬ್ ಕ ವಿಕಾಸ್ ಶುರುವಾಗಿದೆ. ದೇಶ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ದಲಿತ, ಹಿಂದುಳಿದ ವರ್ಗಗಳ ಪ್ರಗತಿಗೆ ಮೋದಿ ಸರ್ಕಾರ ಪಣತೊಟ್ಟಿದೆ ಎಂದರು.
ಬುಡಕಟ್ಟು ಜನರ ಜೊತೆ ಮಾತನಾಡಿದ ಅವರು ನಿಮ್ಮ್ ಸಮುದಾಯದ ಮಹಿಳೆಯಾದ ದ್ರೌಪದಿ ಮುರ್ಮುರವರನ್ನು ರಾಷ್ಟ್ರಪತಿ ಮಾಡಿದ್ದೇವೆ. ಹಾಗೂ ನಿಮ್ಮ ಸಮುದಾಯದವರ ಜೀವನವನ್ನೆ ಉಜ್ವಲ ಮಾಡುವ ಸಂಕಲ್ಪ ಹೊಂದಿದ್ದೇವೆ. ಎಂದರು.
#WATCH | BJP national president JP Nadda flags off the Vijaya Sankalp Yatra in Chamarajanagar.#KarnatakaAssemblyElections pic.twitter.com/JXc8OZust8
— ANI (@ANI) March 1, 2023
ಈ ವೇಳೆ ಡ್ರಮ್ ನುಡಿಸುವ ಮುಖಾಂತರ ವಿಜಯ ಸಂಕಲ್ಪ ಯಾತ್ರಗೆ ಚಾಲನೆ ನೀಡಿದರು. ಚಾಲನೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಗೃಹಸಚಿವ ಆರಗ ಜ್ಞಾನೇಂದ್ರ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಮೈಸೂರಿಗೆ ವಿಮಾನದಲ್ಲಿ ಬಂದ ನಡ್ಡಾ ಅಲ್ಲಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ನಂತರ ಮಲೆಮಹದೇಶ್ವರನ ದರ್ಶನ ಪಡೆದರು. ಬಳಿಕ ಯಾತ್ರೆಗೆ ಚಾಲನೆ ನೀಡಲಾಯಿತು.