ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ !

state news

ಬೆಂಗಳೂರು(ಮಾ.3): ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತಿರಿಗೆ ಸಿಕ್ಕಿಬಿದ್ದ ಚನ್ನಗಿರಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಕೆಎಸ್ ಡಿಎಲ್ ನಿಗಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನಿನ್ನೆ ಲೋಕಾಯುಕ್ತ ಪೊಲೀಸರ ಬಲೆಗೆ ಲಂಚ ಸ್ವೀಕರಿಸುತ್ತಿದ್ದ ವೇಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಬಿಡಬ್ಲ್ಯುಎಸ್ ಎಸ್ ಬಿ ಮುಖ್ಯ ಲೆಕ್ಕಾಧಿಕಾರಿ ಕೆಎಎಸ್ ಅಧಿಕಾರಿ ಮಾಡಾಳ್ ಪ್ರಶಾಂತ್ ಸಿಕ್ಕಿಬಿದ್ದು ಲೋಕಾಯುಕ್ತ ನ್ಯಾಯಾಂಗ ಬಂಧನವಾಗಿದೆ.

ಅವರ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಸಿಬ್ಬಂದಿ ರಾತ್ರಿಯಿಂದ ಇಂದು ಬೆಳಗಿನವರೆಗೆ ನಡೆಸಿದ ಸತತ ಕಾರ್ಯಾಚರಣೆ ಮತ್ತು ಶೋಧ ವೇಳೆ 6 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿರುವ ನಿವಾಸದಲ್ಲಿ ಕಂತೆ ಕಂತೆ ಹಣ, ಚಿನ್ನಾಭರಣ ದೊರೆತಿದೆ. 500, 200, 100 ರೂ. ಮುಖ ಬೆಲೆಯ ನೋಟುಗಳ ಕಂತೆಗಳು ಪತ್ತೆಯಾಗಿದ್ದು, ಲೊಕಾಯುಕ್ತ ಅಧಿಕಾರಿಗಳು ಎಣಿಕೆ ಮಾಡುತ್ತಿದ್ದಾರೆ.

ಮಾ.12 ಕ್ಕೆ ಬೆಂಗಳೂರು- ಮೈಸೂರು ಏಕ್ಸ್ ಪ್ರೆಸ್ ಹೆದ್ದಾರಿ ಉದ್ಘಾಟನೆ !

ಜನನಾಯಕನ “ತಿಪ್ಪರಾಜು ಹವಲ್ದಾರ” ಹುಟ್ಟು ಹಬ್ಬವನ್ನು “ಅಭಿಮಾನೋತ್ಸವ” ಹೆಸರಲ್ಲಿ ಆಚರಣೆ

About The Author