ಬಿಎಂಟಿಸಿ ಸಂಚಾರಿ ಉಲ್ಲಂಘನೆ ದಂಡ ಪಾವತಿಗೆ ಚಾಲಕರ ವೇತನ ಕಡಿತ
ಹೌದು ಸ್ನೇಹಿತರೆ. ಕಳೆದ ಫೆಬ್ರವರಿ ತಿಂಗಳ 2 ನೇ ತಾರಿಕು ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿರುವ ಸಂಚಾರಿ ಇಲಾಖೆ . ನಿಗಧಿ ಪಡಿಸಿದ ಅವಧಿಯಲ್ಲಿ ದಂಡ ಪಾವತಿ ಮಾಡಿದರೆ 50 % ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು ಎಂದು ಆದೇಶ ಹೊರಡಿಸಿದ ಬೆನ್ನಲ್ಲೆ ಇಲಾಖೆಗೆ ಕೋಟಿಗಳ ಲೆಕ್ಕದಲ್ಲಿ ದಂಡ ಪಾವತಿಯಾಗಿತ್ತು. ಈ ನಿಯಮ ಪ್ರತಿಯೊಬ್ಬರಿಗೂ ಅನ್ವಯಹಿಸುವ ಕಾರಣ ಸಿಗ್ನಲ್ ಜಂಪ್ ಹಾಗೂ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಬಿಎಂಟಿಸಿ ಬಸ್ಗಳಿಗೂ ಅನ್ವಯಿಸಿದ್ದರಿಂದ ಬಿಎಂಟಿಸಿಗೆ 66 ಲಕ್ಷ ರೂ ದಂಡವನ್ನು ಹಾಕಲಾಗಿತ್ತು. ಇನ್ನು 50% ಆಫರ್ ಇರುವ ಕಾರಣ ಸಂಸ್ಥೆ 33 ಲಕ್ಷ ದಂಡವನ್ನು ಪಅವತಿ ಮಾಡಿದ . ಇನ್ನು ಈ ದಂಡದ ಹಣವನ್ನು ಭರ್ತಿ ಮಾಡಲು ಚಾಲಕರ ಸಂಬಳದಲ್ಲಿ ಕಡಿತಗೊಳಿಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಆಗುವ ನಿಯಮ ಉಲ್ಲಂಘನೆಯನ್ನು ತಡೆಯಲು ಈ ರೀತಿಯಾಗಿ ಚಾಲಕರ ಸಂಬಳದಿಂದಲೆ ಕಡಿತ ಮಾಡಿರುವುದಾಗಿ ತಿಳಿಸಿದ್ದಾರೆ.
ಕಾಲ್ಪನಿಕ ಕೈಲಾಸಕ್ಕೆ ರಾಷ್ಟ್ರವೆಂದು ಘೋಷಿಸಿ ಮೂಲ ಸೌಕರ್ಯ ಒದಗಿಸಲು ಮನವಿ-ಸ್ವಾಮಿ ಸಿತ್ಯಾನಂದ