shira
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 25.5 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಬಿಜೆಪಿ ಶಾಸಕ ರಾಜೇಶ್ ಗೌಡರು ಭೂಮಿ ಪೂಜೆ ನೆರವೇರಿಸಿದ್ದಾರೆ. ಶಿರಾ ನಗರ ಭಾಗದಲ್ಲಿ ಈ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆದಿದೆ.. ಕಾಮಗಾರಿಗಳಿಗೆ ಚಾಲನೆ ನೀಡುವ ಮುನ್ನ, ಶಿರಾ ನಗರದ ಕೋಟೆ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು. ಬಳಿಕ ವಾರ್ಡ್ ಸಂಖ್ಯೆ 1 ಗುಡ್ಡದ ಹಟ್ಡಿ, ವಾರ್ಡ್ ಸಂಖ್ಯೆ 2 ಜ್ಯೋತಿನಗರ, ವಾರ್ಡ್ ಸಂಖ್ಯೆ 4 ಜ್ಯೋತಿನಗರ, ವಾರ್ಡ್ ಸಂಖ್ಯೆ 5 ಭೋವಿ ಕಾಲೋನಿ, ವಾರ್ಡ್ ಸಂಖ್ಯೆ 6 ರಂಗನಾಥ ನಗರ, ವಾರ್ಡ್ ಸಂಖ್ಯೆ 7 ಕಾಳಿದಾಸ ನಗರ, ವಾರ್ಡ್ ಸಂಖ್ಯೆ 8 ಕಾಳಿದಾಸ ನಗರ, ವಾರ್ಡ್ ಸಂಖ್ಯೆ 9 ಸೊಪ್ಪಿನಹಟ್ಟಿ, ವಾರ್ಡ್ ಸಂಖ್ಯೆ 10 ಲಾಡಪುರ, ವಾರ್ಡ್ ಸಂಖ್ಯೆ 11 ಕಛೇರಿ ಮೊಹಲ್ಲಾ, ವಾರ್ಡ್ ಸಂಖ್ಯೆ 12 ಶಿರಾನಿ ಮೊಹಲ್ಲಾ, ವಾರ್ಡ್ ಸಂಖ್ಯೆ 13 ಕೋಟೆ, ವಾರ್ಡ್ ಸಂಖ್ಯೆ 14 ಕೋಟೆ, ವಾರ್ಡ್ ಸಂಖ್ಯೆ 15 ಪಾರ್ಕ್ ಮೊಹಲ್ಲಾ, ವಾರ್ಡ್ ಸಂಖ್ಯೆ 26 ಮಲ್ಲಿಕಾಪುರ, ವಾರ್ಡ್ ಸಂಖ್ಯೆ 27 ಮಾರುತಿ ನಗರ, ವಾರ್ಡ್ ಸಂಖ್ಯೆ 28 ಸಂತೆಪೇಟೆ, ವಾರ್ಡ್ ಸಂಖ್ಯೆ 30 ವಿದ್ಯಾನಗರ, ವಾರ್ಡ್ ಸಂಖ್ಯೆ 31 ಸಪ್ತಗಿರಿ ಬಡಾವಣೆಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾರ್ಯಕರ್ತರು, ಸೂಡ ಅಧ್ಯಕ್ಷರು, ಸದಸ್ಯರು, ವಾರ್ಡನ ಪ್ರಮುಖ ಮುಖಂಡರು, ಅಧಿಕಾರಿಗಳು, ಗುತ್ತಿಗೆದಾರರು ಹಾಜರಿದ್ದರು.
ಬಿಜೆಪಿಗೆ ಬೆಂಬಲ ಸೂಚಿಸಿದ್ದಕ್ಕೆ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ-ಕುಮಾರಣ್ಣ