- Advertisement -
district story:
ಬೆಂಗಳೂರು ಮಂಡ್ಯ ಮೈಸೂರು ಎಕ್ಸಪ್ರಸ್ ಹೈವೆ ನಿನ್ನೆ ರಾಷ್ಟ್ರೀಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರು ತಮ್ಮ ಅಮೃತ ಹಸ್ತದಿಂದ ಉದ್ಗಾಟನೆ ಮಾಡಿದ್ದಾರೆ. ಇದಾದ ಬಳಿಕ ಒಂದು ಗಂಟೆಕಳೆದಿಲ್ಲ ಇದೇ ರಸ್ತೆಯಲ್ಲಿ ಹಾದು ಹೋಗಿರುವ ಕಾರೊಂದು ಮದ್ದೂರು ಪಟ್ಟಣದ ಶಿಂಷಾ ನದಿ ಸೇತುವೆ ಬಳಿಯ ಫ್ಲೈ ಓವರ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಆದರೆ ಕಾರಿನಲ್ಲಿರುವ ಮೂರು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿರುವ ಏರ್ ಬ್ಯಾಗ್ ಓಪನ್ ಆಗಿರುವ ಕಾರಣ ಸಣ್ಣ ಪುಟ್ಟ ಗಾಯಗಳಾಗಿವೆ. ಕಾರು ಪಲ್ಟಿಯಾದ ನಂತರ ಸ್ಥಳಿಯರು ಅವರನ್ನು ರಕ್ಷಿಸಿದ್ದಾರೆ.ಮದ್ದೂರು ಪೋಲಿಸ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -