national stories
ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಂಪನಿಗಳು ಆರ್ಥಿಕವಾಗಿ ಸಂಕಷ್ಟ ಎದಿರಿಸುತಿದ್ದು ಬ್ಯಾಂಕುಗಳು ಸಹ ಸಾಕಷ್ಟು ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಿ ಶೇರುಗಳಲ್ಲಿ ಬಾರಿ ಪ್ರಮಾಣದ ಕುಸಿತವನ್ನು ಕಂಡಿವೆ. ಇದೇ ಸಾಲಿನಲ್ಲಿ ಈಗ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕೂಡ ಸೇರಿಕೊಂಡಿದೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ ಆರ್ಥಿಕವಾಗಿ ಕುಸಿತದಿಂದಾಗಿ ಈ ಬ್ಯಾಂಕ್ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ ಝರೋಧೆ ಶೇರ್ ಮಾರ್ಕೆಟಿಂಗ್ ನ ಸಂಸ್ಥಾಪಕ ಮತ್ತು ಇನ್ವೆಸ್ಟರ್ ಆಗಿರುವ ನಿತಿನ್ ಕಾಮತ್ ಅವರು ಎಸ್ ಸಿ ಬಿ ಕುಸಿತದಿಂದಾಗಿ ನಾವು ಕಲಿಯಬೇಕಾಗಿರುವ ವಿಷಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ.
ಎಸ್ ವಿಬಿ ಆಗಿರಬಹುದು ಅಥವಾ ಇತ್ತೀಚಿನ ಯೆಸ್ ಬ್ಯಾಂಕ್ ಆಗಿರಬಹುದು ಇದರ ಕುಸಿತದ ಬಗ್ಗೆ ಟ್ವೀಟ್ ಮಾಡಿರುವ ಕಾಮತ್, ಎಲ್ಲಾ ಉದ್ಯಮದಲ್ಲೂ ಒಂದಲ್ಲಾ ಒಂದು ಹಂತದಲ್ಲಿ, ಅನಿರೀಕ್ಷಿತ ಬದಲಾವಣೆಗಳು ಎದುರಾಗಬಹುದು. ಆದ್ದರಿಂದ ಪ್ರತಿಯೊಂದನ್ನೂ ರಿಸ್ಕ್ ಎಂದೇ ಪರಿಗಣಿಸಿ ಹಾಗೂ ಅದನ್ನು ಎದುರಿಸಲು ಅಥವಾ ನಿವಾರಿಸಲು ಅಗತ್ಯವಿರುವ ಎಲ್ಲವನ್ನೂ ಮಾಡಿ. ಉದ್ಯಮದಲ್ಲಿ ಅಂತಹ ಸನ್ನಿವೇಶಗಳನ್ನು ಎದುರಿಸಿ ದಾಟಿ ಮುಂದೆ ಸಾಗಬೇಕು ಎಂದು ವಿವರಿಸಿದ್ದಾರೆ.
It is ridiculous how many things can go wrong when running a business. Everything from rapid change to market sentiment to waking up one day and being unable to access money in the bank, like with SVB.
I think an underrated skill set for running a business is being pessimistic.… https://t.co/S4k6DjbVDv
— Nithin Kamath (@Nithin0dha) March 13, 2023


