Saturday, April 19, 2025

Latest Posts

ಶಿವಾಜಿ ನಗರದ ಹಬ್ಬ ದಿನವಾಗಿ ಇಂದು ಚಾಂದಿನಿ ವೃತ್ತ ಲೋಕಾರ್ಪಣೆ

- Advertisement -

bengalore news

ಬೆಂಗಳೂರಿನ ಕೇಂದ್ರ  ಬಿಂದುವಿನಂತಿರುವ ಮತ್ತು ಹೃದಯಭಾಗದಲ್ಲಿರುವ ಶಿವಾಜಿನಗರ ವಾಣಿಜ್ಯ ಮಾರುಕಟ್ಟೆ ಬಹು ಹೆಸರುವಾಸಿಯಾದ ವಾಣಿಜ್ಯ ಸ್ಥಳ ಈ ವಾಣಿಜ್ಯ ಸ್ಥಳದಲ್ಲಿರುವ ಚಾಂದನಿ ಚೌಕನಲ್ಲಿರುವ  ಹಳೆಯ ಶಿಲಾಸ್ಥಂಭ ಸುಮಾರು 20ದಶಕಗಳ ಇತಿಹಾಸವಿದೆ.ಆದರೆ ಮಳೆ ಗಾಳಿ ಬಿಸಿಲಿನಿಂದಾಗಿ ಈಗ ಅದು ಶಿಥಿಲಾವಸ್ಥೆಗೆ ಬಂದು ತಲುಪಿದೆ,. ಇದನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಇಲ್ಲಿನ ಪಳಿಯುಳಿಕೆ ಅಳಿಯುವುದರಲ್ಲಿ ಎರಡು ಮಾತಿಲ್ಲ. ಇದು ಒಂದೆ ಅಲ್ಲದೆ ಇಲ್ಲಿರುವ ಹಲವು ಹಳೆಯ ಕಟ್ಟಡಗಳಾದ ಸೆಂಟ್ ಬೆಸಲಿಕಾ ಚರ್ಚ. ಶತಮಾನದ ಇತಿಹಾಸವಿರುವ ರೆಸೆಲ್ ಮಾರ್ಕೆಟ್  ಎರಡುವರೆ ದಶಕಗಳ ಹಿಂದೆ ನಿರ್ಮಾಣವಾಗಿರುವ ಪುರತನ ಬಾವಿ ಈ ಎಲ್ಲಾ ಪಾರಂಪಾರಿಕ ಕಟ್ಟಡಗಳು ಇತ್ತೀಚಿನ ದಿನಗಳಲ್ಲಿ  ಸರ್ಕಾರದ ಬೇಜವಬ್ದಾರಿತನದಿಂದಾಗಿ ಸ್ವಚ್ಛತೆ ಮರೆಮಾಚಿ ಹೋಗಿ ಅಳಿವಿನ ಅಮಚಿಗೆ ಮತ್ತು ಕಸದಿಂದ ಕೂಡಿ ತನ್ನ ವಾಸ್ತವತೆಯನ್ನು ಕಳೆದುಕೊಂಡಿದ್ದವು ಆದರೆ ನಂತರ ಎಚ್ಚೆತ್ತುಕೊಂಡ ಸರ್ಕಾರ ಸ್ಮಾರ್ಟ  ಸಿಟಿ, ಬಿಬಿಎಂಪಿ ಅನುದಾನ ಹಾಗೂ ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಡಿ ಸುಮಾರು 7 ಕೋಟಿ ರೂ ವೆಚ್ಚದಲ್ಲಿ ಈ ಇತಿಹಾಸ ಸಾರುವ ಪಳಿಯಿಳಿಕೆಗಳನ್ನು ಪುನಶ್ಚೇತನ ಮಾಡಲಾಗಿದೆ.

ಚಾಂದಿನಿ ಚೌಕ್ ಸಂಪೂರ್ಣವಾಗಿ ಬದಲಾಗಿ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ನೋಡುಗರ ಕಣ್ಮನಸೇಳೆಯುವಷ್ಟು ಬದಲಾಗಿದೆ.ಆಧುನಿಕ ಸೌಕರ್ಯಗಳನ್ನು ಹೊಂದಿದ್ದ ಪ್ಲಾಜಾವು ನಿತ್ಯ ಹರಿದ್ವರ್ಣದಂತೆ ಹಚ್ಚ ಹಸಿರಿನಿಂದ ಕೂಡಿದೆ. ಶೌಚಾಲಯ ವಿಶ್ರಾಂತಿ ತಾಣಗಳು ಎಲ್ಲವು ಹೊಂದಿದ್ದು ವಾರಾಂತ್ಯದಲ್ಲಿ ಒಮ್ಮೆ ಬೇಟಿಕೊಟ್ಟು ಇಡಿ ವಾರದ ಬೇಜಾರು ಮತ್ತು ಆಯಾಸವನ್ನು ಕುಟುಂಬದೊಂದಿಗೆ ಕಳೆಯಲು ಹೇಳಿಮಾಡಿಸಿದ ಜಾಗವಾಗಿದೆ.

ಇಂದು ಮಾರ್ಚ 18  ಚಾಂದಿನಿ ವೃತ್ತದ ಉದ್ಗಾಟನೆ ಇದ್ದು ವಿವಿಧ ಮನೋರಂಜನೆ ಕಾರ್ಯಕ್ರಮಗಳು ಜರುಗಲಿವೆ.

ದೇಶದ ಅತ್ಯಂತ ಮೌಲ್ಯಯುತವಾದ ಕಂಪನಿ ಪೋನ್ ಪೇ

ಜಗ್ಗೇಶ್ ನಟನೆಯ “ರಾಘವೇಂದ್ರ ಸ್ಟೋರ್” ಚಿತ್ರಮಂದಿರಕ್ಕೆ ಏಪ್ರಿಲ್ 28 ರಂದು

ಸಾರಿಗೆ ಇಲಾಖೆಯ ಸಿಬ್ಬಂದಿಗೆ ಕೈ ಮುಗುದ ವಿದೇಶಿ ಪ್ರಜೆ ಯಾಕೆ ನೋಡಿ ?

- Advertisement -

Latest Posts

Don't Miss