ಹಾಸನ:
ನಗರದ ಎನ್.ಆರ್. ವೃತ್ತದ ಬಳಿ ಡಾ. ರಾಜಕುಮಾರ್, ಪುನೀತ್ ರಾಜಕುಮಾರ್ ಹಾಗೂ ಶಿವರಾಜಕುಮಾರ್ ಅಭಿಮಾನಿ ಸಂಘದ ಸಂಯುಕ್ತಾಶ್ರಯದಲ್ಲಿ ಡಾ.ಪುನೀತ್ ರಾಜಕುಮಾರ್ ಪುತ್ಥಳಿಯನ್ನು ಅಭಿಮಾನಿಗಳು ಅನಾವರಣಗೊಳಿಸಿದರು ಹಾಗೂ ವೀಕ್ಷಣೆ ಮಾಡಲು ಬಂದವರಿಗೆ ರುಚಿರುಚಿಯಾದ ಬಿರಿಯಾನಿ ಬೋಜನ ನೀಡಿದರು.
ನಂತರ ಅಭಿಮಾನಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಮೂರ್ತಿ ಹಾಗೂ ರತೀಶ್ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯ ಆಶೀರ್ವಾದದೊಂದಿಗೆ ಪುನೀತ್ ರಾಜಕುಮಾರ್ ರವರ ಜನ್ಮದಿನದ ಅಂಗವಾಗಿ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ಹಾಸನದ ಶಾಸಕರು ಹಾಗೂ ಎಲ್ಲಾರ ಸಹಕಾರದಲ್ಲಿ ಅಭಿಮಾನಿಗಳು ಸೇರಿ ಪುನೀತ್ ಅವರ ಪ್ರತಿಮೆ ಮಾಡಲು ನಿರ್ಧರಿಸಿ ಇಂದು ಶುಭ ಸಂದರ್ಭ ಕೂಡಿ ಬಂದಿದೆ ಎಂದರು. ಅನೇಕ ವರ್ಷಗಳಿಂದಲೂ ಡಾ. ರಾಜಕುಮಾರ್ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಅಭಿಲಾಶೆ ಹೊಂದಿದ್ದು, ಆದ್ರೆ ಪುನಿತ್ ರಾಜಕುಮಾರ್ ಪ್ರತಿಮೆಯನ್ನು ಉದ್ಘಾಟನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಡಾ. ರಾಜಕುಮಾರ್ ಅವರ ಪ್ರತಿಮೆ ಮಾಡುವುದಾಗಿ ಹೇಳಿದರು. ಪುನೀತ್ ರಾಜಕುಮಾರ್ ಅವರಿಗೆ ಪ್ರಿಯವಾದ ಬಿರಿಯಾನಿಯನು ಮಾಡಿಸಿ ಅಭಿಮಾನಿಗಳಿಗೆ ವಿತರಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅಭಿಮಾನಿ ಸಂಘದ ಅಧಕ್ಷ ರತೀಷ್, ಕಿರಣ್ ರಾ ಗ್, ರೂಪೇಶ್, ಯಶು, ನಾಗರಾಜ್, ಇತರರು ಇದ್ದರು
ಬಂಗಾರಪೇಟೆಯಲ್ಲಿ ಜನ ಬದಲಾವಣೆ ಬಯಸುತಿದ್ದಾರೆ.-ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಮುನಿಸ್ವಾಮಿ
ಕೈ ಕಾಲು ನೋವು, ಮೂಳೆ ನೋವು ಎಲ್ಲದರಿಂದ ಮುಕ್ತಿ ಪಡೆಯಲು ಈ ಲಾಡು ತಿನ್ನಿ..