ಗುರುಮಠಕಲ್:
ನಿನ್ನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಸೈದಾಪುರ ಗ್ರಾಮದಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿರುವ ನೂತನ ಕಾಂಗ್ರೆಸ್ ಕಛೇರಿ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬಗ್ಗೆ ವ್ಯಂಗ್ಯ ಮಾಡಿದರು.
ಇನ್ನು ಮುಂದೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲ್ಲ ನಿಮ್ಮ ಅಮೂಲ್ಯವಾದ ಮತವನ್ನು ಜೆಡಿಎಸ್ ಪಕ್ಷಕ್ಕೆ ಹಾಕಿ ನಿಮ್ಮ ಮತವನ್ನು ನಷ್ಟ ಮಾಡಿಕೊಳ್ಳಬೇಡಿ. ಒಂದು ಬಾರಿ ಬಿಜೆಪಿಯ ಬೆಂಬಲದಿಂದ ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ನೀಡಿತ್ತು ಅದೇ ರೀತಿ ನಾವು ಸಹ ಮುಖ್ಯಮಂತ್ರಿ ಮಾಡಿದ್ದೆವು . ಆಗಲು ಸಹ ಅವರು ಅಧಿಕಾರ ಮಾಡುವಲ್ಲಿ ವಿಫಲರಾದರು. ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ಜವಬ್ದಾರಿ ನಿಭಾಯಿಸಲು ಆಗುವುದಿಲ್ಲ.ಮುಂದೆಯು ಅಧಿಕಾರಕ್ಕೆ ಬರುವುದಿಲ್ಲ ಎಂದರು. ಗುರುಮಠಕಲ್ ಮತ್ತೆ ಕಾಂಗ್ರೆಸ್ ಭದ್ರಕೋಟೆ ಆಗುವಂತೆ ಮಾಡಿ ಡಾ. ಮಲ್ಲಿಕಾರ್ಜುನ ಖರ್ಗೆಗೆ ಶಕ್ತಿ ನೀಡಬೇಕು. ಅವರ ಕೈ ಬಲಪಡಿಸಬೇಕು. ಗೆಲುವಿನ ಕಾಣಿಕೆಯಾಗಿ ಕೊಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಖರ್ಗೆ ಅವರ ಋುಣ ತೀರಿಸಲು ನೀವು ಮುಂದಾಗಬೇಕು. ಅವರು ಗುರುಮಠಕಲ್ ಕ್ಷೇತ್ರಕ್ಕೆ ಯಾವ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು. ಆ ರೀತಿ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಬರಲು ಗುರುಮಠಕಲ್ ಕ್ಷೇತ್ರದಲ್ಲಿ ಜನರು ಅವರಿಗೆ ವಿಶ್ವಾಸ ತುಂಬಬೇಕು ಎಂದರು. ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರದಿಂದ ಕೂಡಿದೆ. ಇದರಿಂದ ರಾಜ್ಯದ ಜನರಿಗೆ ಒಳ್ಳೆಯದಾಗಲು ಪ್ರಿಯಾಂಕಾ ಗಾಂಧಿ ಇಲ್ಲಿನ ಹೆಣ್ಣು ಮಕ್ಕಳಿಗೆ ಆರ್ಥಿಕ ಸಹಾಯವಾಗಲು 2000 ರು.ಗಳು ನೀಡಲು ಹೇಳಿದ್ದಾರೆ ಮತ್ತು ನಮ್ಮ ನಾಯಕ ರಾಹುಲ್ ಗಾಂಧಿ ಸಲಹೆಯಂತೆ ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ 4000 ರು.ಗಳು ನೀಡಲು ಹೇಳಿದ್ದಾರೆ. ಉಚಿತ ವಿದ್ಯುತ್ ಕೊಡಲಾಗುವುದು ಎಂದು ಕಾಂಗ್ರೆಸ್ ಗ್ಯಾರಂಟಿ ಕುರಿತು ಮಾಹಿತಿ ನೀಡಿದರು.
ರಾಷ್ಟ್ರೀಯ ಪಕ್ಷಗಳ ವಿರುದ್ದ ಹರಿಹಾಯ್ದ ಮಾಲೂರು ಜೆಡಿಎಸ್ ಅಭ್ಯರ್ಥಿ ಜೆ.ಇ ರಾಮೇಗೌಡ