ಜಿಲ್ಲಾ ಸುದ್ದಿಗಳು:
‘ಇಂದಿನಿಂದ ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ’ವಿಜೃಂಭಣೆಯಿಂದ ಜರುಗಲಿದ್ದೂ ಅದ್ದೂರಿಯಾಗಿ ಜರುಗಲಿರುವ ಈ ವೈರಮುಡಿ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಈ ವೈರಮುಡಿ ಬ್ರಹ್ಮೋತ್ಸವವು ಇಂದಿನಿಂದ ಏ 8 ರವರೆಗೆ ಜರುಗಲಿದ್ದು ಬರೋಬ್ಬರಿ 12 ದಿನಗಳ ಕಾಲ ಅದ್ದೂರಿಯಾಗಿ ಜರುಗಲಿದೆ ಇನ್ನು ಈ ಉತ್ಸವಕ್ಕೆ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ದತೆಗಳು ನಡೆಯುತ್ತಿದೆ. ಇನ್ನು ಏಪ್ರಿಲ್ 5 ರಂದು ಮೇಲುಕೋಟೆಯಲ್ಲಿ ಚಲುವನಾರಾಯಣ ಸ್ವಾಮಿ ತಪ್ಪೋತ್ಸವ ಜರುಗಲಿದ್ದು ಈ ಉತ್ಸವಕ್ಕೆ ಸುಮಾರು 4 ಲಕ್ಷ ಜನ ಸೇರುವ ನಿರಿಕ್ಷೆ ಇದೆ.
ಉತ್ಸವದಲ್ಲಿ ಯಾವಿದೇ ಅಹಿತಕರ ಘಟನೆ ಸಂಭವಿಸದಂತೆ ಶಾಂತತೆಯನ್ನು ಕಾಪಾಡಲು ಪೋಲಿಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮವಾಗಿ ಬಹಳ ಬಿಗಿ ಬಂದೋಬಸ್ತ ಕೈಗೊಳ್ಳಲಾಗಿದೆ. ಇನ್ನು ಉತ್ಸವಕ್ಕೆ ಬರುವ ಭಕ್ತಾದಿಗಳು ತರುವ ವಾಹನಗಳ ನಿಲುಗಡೆಗೆ ಐದು ಪಾರ್ಕಿಂಗ ವ್ಯವಸ್ತೆ ಮಾಡಲಾಗಿದೆ.ಇನ್ನು ಏ 1 ರಿಂದ ಜಿಲ್ಲಾಡಳಿತದ ಖಜಾನೆಯಿಂದ ವೈರಮುಡಿ ಉತ್ಸವಕ್ಕೆ ಆಭರಣಗಳು ರವಾನೆಯಾಗಲಿವೆ.
ಉತ್ಸವದಲ್ಲಿ ಸೇರುವ ಭಕ್ತಾದಿಗಳು ಶಾಂತರೀತಿಯಿಂದ ಯತ್ಸವವನ್ನು ವಿಕ್ಷಿಸಬೇಕೆಂದು ಮಂಡ್ಯ ಜಿಲ್ಲಾಧಿಕಾರಿ ಹೆಚ್. ಎನ್ ಗೋಪಾಲ ಕೃಷ್ಣ ಮನವಿ ಮಾಡಿದರು .
ರಾಷ್ಟ್ರೀಯ ಪಕ್ಷಗಳ ವಿರುದ್ದ ಹರಿಹಾಯ್ದ ಮಾಲೂರು ಜೆಡಿಎಸ್ ಅಭ್ಯರ್ಥಿ ಜೆ.ಇ ರಾಮೇಗೌಡ
ಹಾಸನದಲ್ಲಿ ಡಾ. ಪುನೀತ್ ರಾಜ್ ಕುಮಾರ್ ಪುತ್ತಳಿ ಅನಾವರಣ ಅಭಿಮಾನಿಗಳಿಗೆ ಬಿರಿಯಾನಿ ಊಟ