Political news:
ಕರ್ನಾಟಕದಲ್ಲಿ ಚುನಾವಣೆ ಸನಿಹದಲ್ಲಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಟಿಕೆಟ್ ಹಂಚಿಕೆ ಮಾಡುವಲ್ಲಿ ಮೀನಾಮೇಶ ಎಣಿಸುತಿದ್ದಾರೆ. ಏಕೆಂದರೆ ಒಂದು ಕ್ಷೇತ್ರದಿಂದ ಒಂದಕ್ಕಿಂತ ಹಲವು ಆಕಾಂಕ್ಷಿಗಳು ಇರುವ ಕಾರಣ ಟಿಕೆಟ್ ಗೊಂದಲ ಶುರುವಾಗಿದೆ ಇದೇ ರೀತಿಯ ಗೊಂದಲು ಈಗ ಕುಂದಗೋಳ ಕ್ಷೇತ್ರದಲ್ಲಿ ಶುರುವಾಗಿದೆ.
ಕುಂದಗೋಲ ಹಾಲಿ ಶಾಸಕಿ ಕುಸುಮವತಿ ಶಿವಳ್ಳಿಗೆ ಮತ್ತೊಮ್ಮೆ ಸ್ಪರ್ದೆ ನೀಡಲು ಸಪಕ್ಷಿಯವಾಗಿ ವಿರೋಧಗಳು ವ್ಯಕ್ತವಾಗುತ್ತಿವೆ. ಕಾಂಗ್ರೆಸ್ ಟಿಕೆಟ್ ಒಳ ಜಗಳದಲ್ಲಿ ಲಾಭ ಪಡೆಯಲು ಈ ನಡುವೆ ಮಾಜಿ ಶಾಸಕ ಎಸ್‌ಐ ಚಿಕ್ಕನಗೌಡರ್ ಮತ್ತು ಎಂಆರ್ ಪಾಟೀಲ್ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ.
ಕುಂದಗೋಳ ಕ್ಷೇತ್ರದಲ್ಲಿ ಇದುವರೆಗೋ ಆವ ಪಕ್ಷವೂ ಸಹ ಅಧಿಕ ಬಹುಮತ ಪಡೆದುಕೊಂಡಿಲ್ಲ ಇದುವರೆಗೂ ಚುನಾವಣೆ ಗೆದ್ದರೂ ಕಾಂಗ್ರೆಸ್ ಪಕ್ಷ ಕೆಲವೇ ಮತಗಳ ಅಂತರದಲ್ಲಿ ಗೆಲುವನ್ನು ಸಾಧಿಸಿದೆ. ಕಳೆದ ಬಾರಿ ಶಾಸಕ ಶಿವಳ್ಳಿ ನಿಧನದ ನಂತರ ನಡೆದ ಟಪ ಚುನಾವಣೆಯಲ್ಲಿ 2018 ರ ಚುನಾವಣೆಯಲ್ಲಿ, ಶಿವಳ್ಳಿ ಕೇವಲ 634 ಮತಗಳಿಂದ ಗೆದ್ದರು ಮತ್ತು ಉಪಚುನಾವಣೆಯಲ್ಲಿ ಅನುಕಂಪದ ಅಲೆಯಿದ್ದರೂ ಅವರ ಪತ್ನಿ 1,601 ಮತದಾರರ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದರು.
ಈ ಹಿಂದೆ ಶಾನಕ ಶಿವಳ್ಳಿ ಯವರು ಜನರ ಕಷ್ಟಗಳಿಗೆ ಸ್ಪಂದಿಸುತಿದ್ದರು ಕುಮದುಕೊರತೆಗಳನ್ನು ನಿವಾರಿಸುತಿದ್ದರು ಅವರು ಜನರ ಹತ್ತಿರ ಬೆರೆಯುತಿದ್ರು . ಇ ಸಹನೂಬೂತಿ ಇದ್ದರೂ ಶಾಸಕಿ ಕುಸುಮಾವತಿ ಶಿವಳ್ಳಿಯವರಂತೆ ಜನರ ಜೊತೆ ಬೆರೆಯುತ್ತಿಲ್ಲ ಎಂದು ಜನರು ಆರೋಪ ಮಾಡುತಿದ್ದಾರೆ.
ಕುಸುಮಾವತಿ ಅವರ ಕುಟುಂಬದವರು ಸೇರಿದಂತೆ ಪಕ್ಷದಲ್ಲಿರುವ ವಿರೋಧಿಗಳು ಟಿಕೆಟ್ ನಿರಾಕರಿಸಲು ಕುಸುಮಾವತಿ ಅವರ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, ರಾಜ್ಯದ ಎಲ್ಲ ಪ್ರಮುಖ ನಾಯಕರು ಶಿವಳ್ಳಿ ಅವರ ಪರವಾಗಿದ್ದ ಕಾರಣ 2019ರ ಉಪಚುನಾವಣೆಯಲ್ಲಿ ಕುಸುಮಾವತಿ ಶಿವಳ್ಳಿ ಅವರಿಗೆ ಟಿಕೆಟ್ ನೀಡಲು ಬೆಂಬಲಿಸಿದ್ದರು. ಆದರೆ, ಈಗ , ಟಿಕೆಟ್ ನೀಡದಂತೆ ಪಕ್ಷದ ನಾಯಕತ್ವದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷದ ಕಚ್ಚಾಟವು ಸ್ಪಷ್ಟವಾಗಿ ಕಂಡುಬರುತ್ತಿದ್ದಂತೆ, ಕೇಸರಿ ಪಕ್ಷದ ಆಕಾಂಕ್ಷಿಗಳು ಸುಲಭವಾಗಿ ಸ್ಥಾನವನ್ನು ಗೆಲ್ಲುವ ಅವಕಾಶ ಬಳಸಿಕೊಳ್ಳಲು ನೋಡುತ್ತಿದ್ದಾರೆ. ಕಳೆದ ಮೂರು ಬಾರಿ ಸೋಲು ಕಂಡಿದ್ದರೂ ಬಿಜೆಪಿಯ ಆಕಾಂಕ್ಷಿ ಚಿಕ್ಕನಗೌಡರು ಈ ಕ್ಷೇತ್ರದಿಂದ ಕೊನೆಯ ಬಾರಿಗೆ ಸ್ಪರ್ಧಿಸಲು ಮುಂದಾಗಿದ್ದಾರೆ.
ಕಾಂಗ್ರೆಸ್ ಟಿಕೆಟ್ ಗಾಗಿ ಮಹಿಳಾಮಣಿಯರ ಪೈಪೋಟಿ-ಅದು ಧಾರವಾಡ ಗ್ರಾಮೀಣ ಕ್ಷೇತ್ರ