ಕೋಲಾರ :
2023ರ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಜೆಡಿಎಸ್ ನಲ್ಲಿ ಬಂಡಾಯ ಕೂಗು ಕೇಳಿ ಬಂದಿದೆ, ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಟವಾಗಿದ್ದು ಚುನಾವಣೆಗೂ ಮುನ್ನ ಭಿನ್ನಮತ ಸ್ಫೋಟಗೊಳ್ಳುವ ಮೂಲಕ ಜೆಡಿಎಸ್ ಗೆ ದೊಡ್ಡ ಶಾಕ್ ಎದುರಾಗಿದೆ. ಹೌದು ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಕಳೆದ ನಾಲ್ಕುವರೆ ವರ್ಷದಿಂದ ಜನಸೇವೆ ಮೂಲಕ ಮನೆಮಾತಾಗಿದ್ದು ಇದನ್ನು ಗಮನಿಸಿದ ಜೆಡಿಎಸ್ ಹೈಕಮಾಂಡ್ ಜೆಡಿಎಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದರು. ಆದ್ರೆ ಜೆಡಿಎಸ್ ಪಕ್ಷವನ್ನ ತಳಮಟ್ಟದಿಂದ ಕಳೆದ 19 ವರ್ಷಗಳಿಂದ ಕಟ್ಟಿ ಬೆಳೆಸಿದ ಜೆಡಿಎಸ್ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಸಹ ಈ ಬಾರಿ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಅಂತಿಮವಾಗಿ ಶ್ರೀನಾಥ್ ರಿಗೆ ಟಿಕೆಟ್ ಘೋಷಣೆ ಮಾಡಿದರೂ ಸ್ವಾರ್ಥವನ್ನ ಬದಿಗೊತ್ತಿ ಜೆಡಿಎಸ್ ಪಕ್ಷದ ಗೆಲುವಿಗಾಗಿ ಪಕ್ಷ ಸಂಘಟನೆಗೆ ಕುರ್ಕಿ ರಾಜೇಶ್ವರಿ ಮುಂದಾಗಿದ್ದರು. ಆದ್ರೆ ಕಳೆದ 4 ತಿಂಗಳಿನಿಂದಲೂ ಜೆಡಿಎಸ್ ಅಭ್ಯರ್ಥಿ ಶ್ರೀನಾಥ್ ತಾಲ್ಲೂಕು ಅಧ್ಯಕ್ಷರನ್ನು ಕಡೆಗಣಿಸಿರುವ ಆರೋಪ ಇದೀಗ ಕೇಳಿಬಂದಿದ್ದು, ಕುರ್ಕಿ ರಾಜೇಶ್ವರಿ ಈ ಬಗ್ಗೆ ತಮ್ಮ ಬೆಂಬಲಿಗರ ಸಭೆ ಕರೆದು ಮುಂದಿನ ವಿದ್ಯಾಮಾನಗಳ ಬಗ್ಗೆ ಚರ್ಚಿಸುವ ಮೂಲಕ ಜೆಡಿಎಸ್ ಪಾಳಯದಲ್ಲಿ ಬಿರುಗಾಳಿಯನ್ನ ಎಬ್ಬಿಸಿದ್ದಾರೆ. ಯಾವುದೆ ಸಭೆ ಸಮಾರಂಭಗಳಿಗೆ ತಾಲ್ಲೂಕು ಅಧ್ಯಕ್ಷರನ್ನ ಆಹ್ವಾನಿಸದೇ ಅಭ್ಯರ್ಥಿ ಶ್ರೀನಾಥ್ ಕಡೆಗಣಿಸಿದ್ದಾರೆ, ಇದರಿಂದ ಗೆಲುವಿನ ಸನಿಹದಲ್ಲಿದ್ದ ಜೆಡಿಎಸ್ ಗೆ ಸೋಲಿನ ಕಹಿ ವಾಸನೆ ಬರಲಾರಂಬಿಸಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುರ್ಕಿ ರಾಜೇಶ್ವರಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ಗೌರವ ಕೊಡ್ತೇವೆ, ಆದ್ರೆ ಅಭ್ಯರ್ಥಿಯ ನಡವಳಿಕೆಗಳು ನಮಗೆ ಮೊದಲಿನಿಂದಲು ಹೊಂದಿಕೊಳ್ಳುತ್ತಿಲ್ಲ. ಅವರು ಮೂಲ ಜೆಡಿಎಸ್ ಕಾರ್ಯಕರ್ತರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿಲ್ಲ, ಅಭ್ಯರ್ಥಿ ಆದವರು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಅದು ಬಿಟ್ಟು ಅವರು ಹಳಬರನ್ನು ಕಡೆಗಣಿಸಿ ಹೊಸಬರನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ನಾನು 19 ವರ್ಷಗಳಿಂದ ಜೆಡಿಎಸ್ ಪಕ್ಷ ಸಂಘಟನೆಗಾಗಿ ದುಡಿದಿದ್ದೇನೆ. ಪಕ್ಷ ಸಂಘಟನೆಯಲ್ಲಿ ಅಭ್ಯರ್ಥಿ ಅವರ ಕೊಡುಗೆ ಏನೂ ಇಲ್ಲ ಎಂದು ಹರಿಹಾಯ್ದರು.
ಇನ್ನು ನಮ್ಮ ಜೊತೆ ಕೂತು ಸಮಸ್ಯೆ ಬಗೆಹರಿಸಿಕೊಂಡರೆ ಎಲ್ಲವೂ ಸರಿ ಹೋಗುತ್ತದೆ. ಅದನ್ನು ಮಾಡುವಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀನಾಥ್ ರವರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ, ನಾಳೆ ಚುನಾವಣಾ ಫಲಿತಾಂಶದಲ್ಲಿ ಹೆಚ್ಚುಕಡಿಮೆಯಾದರೆ ನಮ್ಮ ತಲೆ ಮೇಲೆ ಬರುತ್ತೆ. ಹಾಗಾಗಿ ಹೀಗಲೇ ನಮ್ಮ ನೋವುಗಳನ್ನ ಹೈಕಮಾಂಡ್ ಗೆ ತಿಳಿಸಿ ನನ್ನ ಬೆಂಬಲಿಗರ ಸಭೆಯನ್ನ ಮಾಡಿ ಮುಂದಿನ ನಡೆಯ ಬಗ್ಗೆ ಚರ್ಚಿಸಲಾಗಿದೆ. ಅಭ್ಯರ್ಥಿ ನಡವಳಿಕೆಗಳ ವಿರುದ್ಧ
ಹೈಕಮಾಂಡ್ ಗಮನಕ್ಕೆ ತಂದಿದ್ದು, ವರಿಷ್ಠರು ಸಹ ಸರಿಪಡಿಸಿಕೊಂಡು ಹೋಗಬೇಕು ಎಂದು ಅಭ್ಯರ್ಥಿಗೆ ತಿಳಿಸಿದ್ದಾರೆ, ಆದರೂ ಸಹ ಅವರಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ, ನಮ್ಮ ಜೊತೆಯೂ ಚರ್ಚಿಸಲಿಲ್ಲ. ನಮ್ಮಲ್ಲಿ ಎಲ್ಲವೂ ಸರಿಯಿಲ್ಲ ಅಂದಾಗ ಬೇರೆ ಪಕ್ಷದವರು ನಮ್ಮನ್ನು ಸಂಪರ್ಕ ಮಾಡಿರುವುದು ನಿಜ. ಕಾಂಗ್ರೆಸ್ ಮತ್ತು ಬಿಜೆಪಿಯವರು ಅವರ ಪಕ್ಷಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ನನ್ನ ನಿರ್ಧಾರ ಏನು ಅಂತ ತಿಳಿಸಿಲ್ಲ. ಆದ್ರೆ ನಮ್ಮ ಪಕ್ಷದವರೇ ಕಾಂಗ್ರೆಸ್, ಬಿಜೆಪಿಗೆ ಸಪೋರ್ಟ್ ಮಾಡ್ತೀನಿ ಅಂತ ನನ್ನ ವಿರುದ್ಧ ಹೇಳಿಕೊಳ್ತಿದ್ದಾರೆ. ಆದ್ರೆ ಅವಕಾಶಕ್ಕಾಗಿ ನಾನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ, ಬೆಂಬಲವೂ ನೀಡಲ್ಲ. ಮುಂದಿನ ದಿನಗಳಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದರೆ ನಾನು ಏನು ಮಾಡಬೇಕು? ಚುನಾವಣೆ ಸಮಯದಲ್ಲಿ ನಮ್ಮನ್ನು ಪರಿಗಣನೆಗೆ ನಮ್ಮ ಪಕ್ಷದವರೇ ತೆಗೆದುಕೊಳ್ಳುತ್ತಿಲ್ಲ . ಇದಕ್ಕೆ ನೇರ ಕಾರಣ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರು. ಕಾರ್ಯಕ್ರಮಗಳಿಗೆ ತಡವಾಗಿ ಬರ್ತಾರೆ ಅಂತ ನನ್ನ ಮೇಲೆ ಆರೋಪ ಮಾಡ್ತಾರೆ. ಹೆಣ್ಣು ಮಗಳಾಗಿರುವ ಕಾರಣ ಕಾರ್ಯಕ್ರಮಕ್ಕೆ ಬರುವುದು ಕೆಲವೊಮ್ಮೆ ತಡವಾಗುತ್ತೆ. ಅದೂ ಅಲ್ದೆ ಕೆಲವೊಮ್ಮೆ ಕಾರ್ಯಕ್ರಮಕ್ಕೆ ಎರಡು ಮೂರು ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಾಗುತ್ತೆ. ಅಂತಹ ಸಮಯದಲ್ಲಿ ಸ್ಟೇಜ್ ಮೇಲೆ ಹೋಗುವುದು ಸ್ವಲ್ಪ ತಡವಾಗಬಹುದು. ಚುನಾವಣೆಯಲ್ಲಿ ಗೆದ್ದರೂ ಸೋತರೂ ಅವರೇ ಹೊಣೆಯಾಗುತ್ತಾರೆ. ನಾನು ಸಹ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದೆ, ಆದ್ರೆ ನಮ್ಮ ಗ್ರಾಮದಲ್ಲಿಯೇ ನಮಗೆ ಮಾಹಿತಿ ನೀಡದೆ ಜೆಡಿಎಸ್ ನವರು ಕಾರ್ಯಕ್ರಮ ಮಾಡ್ತಾರೆ ಹಾಗಾದ್ರೆ ನಾನು ಅವರಿಗೆ ಅವಶ್ಯಕತೆ ಇಲ್ಲ ಅನ್ಸುತ್ತೆ ಅಥವಾ ನನ್ನನ್ನು ಪಕ್ಷದಿಂದ ತೆಗೆಯಲು ಈ ರೀತಿ ಮಾಡ್ತಿರಬಹುದು. ಹಾಗಾಗಿ ಈಗಲೇ ಸಮಸ್ಯೆಯನ್ನು ಬಗೆಹರಿಸದಿದ್ರೆ ನನ್ನ ಬೆಂಗಲಿಗರ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತೇನೆ.
ಒಟ್ಟಾರೆ ಜೆಡಿಎಸ್ ಪಕ್ಷದಲ್ಲಿ ಮಹಿಳಾ ಕಾರ್ಯಕರ್ತರಿಗೆ ಹೆಚ್ಚಿನ ಮಣ್ಣನೆ ಸಿಗುತ್ತಿಲ್ಲ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಇದಾಗಿದ್ದು, ಮಹಿಳೆಯಾಗಿ ಕಳೆದ 19 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದು ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಟಿಕೆಟ್ ತ್ಯಾಗ ಮಾಡಿರುವ ಕುರ್ಕಿ ರಾಜೇಶ್ವರಿರನ್ನ ಕಡೆಗಣಿಸಿರುವ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಇನ್ನಾದ್ರು ತನ್ನ ಪಕ್ಷದಲ್ಲಿರುವ ಒಡಕುಗಳನ್ನ ಸಡಿಪಡಿಸಿಕೊಂಡು ಚುನಾವಣೆ ಎದುರಿಸ್ತಾರ ಇಲ್ವೋ ಕಾದು ನೋಡಬೇಕಾಗಿದೆ.
ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಆವಿಷ್ಕಾರಕ್ಕೆ ತಯಾರಾಗಿರುವ ವ್ಯಾಟ್ಸಪ್