1 ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಯಾಕೆ ಬಂದಿಲ್ಲ?
2 ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ತಂಡದ ಪ್ರವಾಹ ವೀಕ್ಷಣೆಯ ಫಲ ಏನು?
3 ಈ ಭೀಕರ ಪ್ರವಾಹ ವಿಕೋಪವನ್ನು “ರಾಷ್ಟ್ರೀಯ ವಿಪತ್ತು” ಎಂದು ಯಾಕೆ ಘೋಷಿಸಲಿಲ್ಲ?
4 ಇಷ್ಟು ದೊಡ್ಡ ಮಟ್ಟದ ನಷ್ಟ ಸಂಭವಿಸಿದರೂ ಯಡಿಯೂರಪ್ಪನವರ ಬೇಡಿಕೆಯಂತೆ ಕೇಂದ್ರವು ₹5,000 ಕೋಟಿ ಮಧ್ಯಂತರ ಪರಿಹಾರ ಬಿಡುಗಡೆ ಯಾಕೆ ಮಾಡಲಿಲ್ಲ?
5 ಪ್ರಧಾನಿಯವರು ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡದೆ ಕರ್ನಾಟಕವನ್ನು ಅವಮಾನಿಸುತ್ತಿರುವುದೇಕೆ?
6 ತಕ್ಷಣ ಪರಿಹಾರ ಬಿಡುಗಡೆಗಾಗಿ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರುತ್ತಿಲ್ಲ ಏಕೆ?
7 ರಾಜ್ಯ ಸರ್ಕಾರವು ಪ್ರಧಾನಿ ಬಳಿ ಪರಿಹಾರ ಕೇಳಲು ಸರ್ವಪಕ್ಷಗಳ ನಾಯಕರು, ಕೆಲ ಸಂತ್ರಸ್ತರು, ರೈತ ಮುಖಂಡರ ನಿಯೋಗವನ್ನು ಯಾಕೆ ಕರೆದೊಯ್ಯುತ್ತಿಲ್ಲ?
8 ಬಿಜೆಪಿ 25 ಸಂಸದರು ತಮ್ಮ ಕರ್ತವ್ಯ ಮರೆತು ಕಣ್ಮರೆಯಾಗಿರುವುದೇಕೆ?
9 ಸಂತ್ರಸ್ತರು ಪ್ರತಿಭಟಿಸುವರೆಂದು ಹೆದರಿ ಬೆಳಗಾವಿಯಲ್ಲಿ ಅಧಿವೇಶನ ಮಾಡದಿರುವುದು ಪಲಾಯನವಲ್ಲವೇ?
10 ನಷ್ಟ ₹35,160ಕೋಟಿ ಎಂದು ಅಂದಾಜಿಸಿ ರಾಜ್ಯವು ₹1500ಕೋಟಿ ಬಿಡುಗಡೆ ಮಾಡಿರುವುದು ಸಂತ್ರಸ್ತರಿಗೆ ಮಾಡಿರುವ ಅನ್ಯಾಯವಲ್ಲವೇ?
ನೆರೆಸಂತ್ರಸ್ತರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನ್ಯಾಯ ಮಾಡ್ತಿದೆಯಾ..? ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ