ಕರ್ನಾಟಕ ಟಿವಿ : ಆರೋಗ್ಯ ಸಚಿವ ಶ್ರೀರಾಮುಲು ಜೀವನ್ಮರಣಾ ಹೋರಾಟದಲ್ಲಿದ್ದ ಮಹಿಳೆಯನ್ನ ತಮ್ಮ ವಾಹನದಲ್ಲೇ ಆಸ್ಪತ್ರೆ ಸೇರಿ ಮಾನವೀಯತೆ ಮರೆದಿದ್ದಾರೆ. ಚಾಮರಾಜನಗರ ಜಿಲ್ಲೆ ಪ್ರವಾಸದಲ್ಲಿರುವ ರಾಮುಲು ಮಹದೇಶ್ವರ ಬೆಟ್ಟಕ್ಕೆ ತೆರಳುವಾಗ ರಸ್ತೆ ಬದಿಯಲ್ಲಿ ತೀವ್ರ ಅನಾರೋಗ್ಯದಿಂದ ಮಹಿಳೆ ನರಳುತ್ತಿದ್ದಾಗ ಕಾರು ನಿಲ್ಲಿಸಿ ತಕ್ಷಣ ತಮ್ಮ ಕಾರಿನಲ್ಲೇ ಮಹಿಳೆಯನ್ನ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವಿಷ್ಯವನ್ನ ಸ್ವತಃ ತಮ್ಮ ಫೇಸ್ ಖಾತೆಯಲ್ಲಿ ರಾಮುಲು ತಿಳಿಸಿದ್ದಾರೆ.
“ಜೀವಕ್ಕೆ ಬೆಲೆ ಕಟ್ಟಲಾಗದು. ಆಪತ್ಕಾಲದಲ್ಲಿ ಹೆಣ್ಣುಮಗಳ ಜೀವ ರಕ್ಷಿಸಿ ಧನ್ಯನಾದೆ.” – ರಾಮುಲು, ಸಚಿವ
ಚಾಮರಾಜನಗರಿಂದ ವಾಹನದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾಗ ರಸ್ತೆ ಬದಿಯ ಮನೆಯೊಂದರ ಬಳಿ ಮಹಿಳೆಯೊಬ್ಬರು ಅನಾರೋಗ್ಯದಿಂದ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ಇದನ್ನು ಗಮನಿಸಿ ನನ್ನದೇ ವಾಹನದಲ್ಲಿ ಆಕೆಯನ್ನು ಮಲೆ ಮಹದೇಶ್ವರದ ಆಸ್ಪತ್ರೆಗೆ ಕಳುಹಿಸಿಕೊಟ್ಟು ಚಿಕಿತ್ಸೆ ಕೊಡಿಸಿದೆ. ಬೆಟ್ಟದಿಂದ ವಾಪಸಾಗುವಾಗ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದೆ. ಆಕೆ ಚೇತರಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಸಚಿವನಾಗಿ ಅಲ್ಲದೇ ಇದ್ದರೂ ಒಬ್ಬ ಸಾಮಾನ್ಯನಾಗಿ ಇನ್ನೊಬ್ಬರ ಪ್ರಾಣ ಉಳಿಸಿದ್ದಕ್ಕಿಂತ ಸಮಾಧಾನದ ಸಂಗತಿ ಇನ್ನೇನಿದೆ?
ನಾನೇನೋ ದೊಡ್ಡ ಕೆಲಸ ಮಾಡಿದೆ ಎಂದು ಹೇಳಿಕೊಳ್ಳುತ್ತಿಲ್ಲ. ಪ್ರತಿಯೊಬ್ಬರಿಗೂ ಮಾನವೀಯ ಕಳಕಳಿ ಇದ್ದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂಬುದು ನನ್ನ ಆಶಯ.

