Sunday, December 22, 2024

Latest Posts

ಇವರೇ ರಾಬರ್ಟ್ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್!

- Advertisement -

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್ ನ ರಾಬರ್ಟ್ ಸಿನಿಮಾದಿಂದ ಹೊಸ ಅಪ್ ಡೇಟ್ ನ್ಯೂಸ್ ವೊಂದು ಸಿಕ್ಕಿದೆ. ಪೋಸ್ಟರ್ ನಿಂದಲ್ಲೇ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡಿದ್ದ ರಾಬರ್ಟ್ ಗೆ ಇತ್ತೀಚಿಗೆ ರಾಣಿ ಸಿಕ್ಕಿದ್ದಳು. ಭದ್ರಾವತಿ ಬೆಡಗಿ ಆಶಾ ಭಟ್ ದರ್ಶನ್ ಗೆ ಜೋಡಿಯಾಗಿ ಅಭಿನಯಿಸಲಿದ್ದಾಳೆ ಅನ್ನೋ ವಿಷ್ಯವನ್ನ ಸ್ವತಃ ನಿರ್ದೇಶಕ ತರುಣ್ ಅನೌನ್ಸ್ ಮಾಡಿದ್ರು.

ಅದೇ ರೀತಿ ರಾಬರ್ಟ್ ಚಿತ್ರದ ಹೊಸ ಅಪ್ ಡೇಟ್ ಗಾಗಿ ಕಾಯ್ತಿದ್ದ ಅಭಿಮಾನಿಗಳಿಗೆ ತರುಣ್ ಇಂಟ್ರೆಸ್ಟಿಂಗ್ ನ್ಯೂಸ್ ಕೊಡೋದಾಗಿ ಹೇಳಿದ್ರು. ನಟ ಅಥವಾ ಸಂಗೀತ ನಿರ್ದೇಶಕರ ಎಂಟ್ರಿ‌ ಕೊಡಲಿದ್ದಾರೆ ಅನ್ನೋದನ್ನ ನೀವೆ ಗೆಸ್ ಮಾಡಿ ಅಂದಿದ್ದರು.

ಅಭಿಮಾನಿಗಳ ನಿರೀಕ್ಷೆಯಂತೆ ರಾಬರ್ಟ್ ಸಿನಿಮಾಗೆ ಮ್ಯೂಸಿಕ್ ಡೈರೆಕ್ಟರ್ ಯಾರು ಅನ್ನೋದನ್ನ ನಿರ್ದೇಶಕ ತರುಣ್ ಸುಧೀರ್ ಅನೌನ್ಸ್ ಮಾಡಿದ್ದಾರೆ. ಅವರೇ ಸ್ಯಾಂಡಲ್ ವುಡ್ ನ‌ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ. ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ನಟಿಸಿದ್ದ ‘ಚಕ್ರವರ್ತಿ’, ‘ತಾರಕ್’, ‘ಒಡೆಯ’ ಸಿನಿಮಾಗಳಿಗೆ ಅರ್ಜುನ್ ಮ್ಯೂಸಿಕ್ ಕಂಪೋಸ್ ಮಾಡಿದ್ರು. ಈಗ ಬಹುನಿರೀಕ್ಷಿತ ‘ರಾಬರ್ಟ್’ಗೂ ಕೈಜೋಡಿಸಿದ್ದಾರೆ.

https://twitter.com/TharunSudhir/status/1180718367436464129?s=20
- Advertisement -

Latest Posts

Don't Miss