ಕಳೆದ ಎರಡು ದಿನಗಳಿಂದ ಬೆಂಗಳೂರಿನ ಗಾಂಧಿಭವನ ಪಕ್ಕದ ವಲ್ಲಭಭಾಯ್ ಅವರಣದಲ್ಲಿ ದುಡಿಮೆ ಗೆಲ್ಲಿಸಿ ಪರಿಸರ ಉಳಿಸಿ ಎನ್ನುವ ಘೋಷಣೆಯಡಿಯಲ್ಲಿ ಮತ್ತು ಕೈ ಮಗ್ಗ ಉದ್ಯಮವನ್ನು ಜಿಎಸ್ಸ್ಟಿ(gst)ಯಿಂದ ಮುಕ್ತಗೊಳಿಸಿ ಎನ್ನುವ ಆಗ್ರಹದೊಂದಿಗೆ ನಾಡಿನ ಹಿರಿಯ ರಂಗಕರ್ಮಿ ಪ್ರಸನ್ನ ಅನಿರ್ಧಿಷ್ಟ ಅಮರಣಾಂತ ಉಪವಾಸ ಸತ್ಯ ಆರಂಭಿಸಿದ್ದಾರೆ
ಇಂದು ಸಿಐಟಿಯು ರಾಜ್ಯ ಸಮಿತಿ ಪರವಾಗಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಉಪಾಧ್ಯಕ್ಷ ಕೆ.ಪ್ರಕಾಶ್,ರಾಜ್ಯ ಕಾರ್ಯದರ್ಶಿ ಗಳಾದ ಕೆ.ಎನ್.ಉಮೇಶ್,ಕೆ.ಮಹಾಂತೇಶ, ಸೈಯದ್ ಮುಜೀಬ್ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಬೆಂಬಲಿಸಿದೆವು.
ಇದೇ ಸಂದರ್ಭದಲ್ಲಿ ಸರ್ವೋಚ್ಚ ನಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ವಿ.ಗೋಪಾಲಗೌಡ, ಹಿರಿಯ ಲೇಖಕಿ ಡಾ.ವಿಜಯಮ್ಮ, ರಂಗಕರ್ಮಿ ಸಿ.ಕೆ.ಗುಂಡಣ್ಣ, ನಿವೃತ್ತ ಪ್ರಾಧ್ಯಾಪಕ ರಾದ ಡಾ ಟಿ.ವೆಂಕಟೇಶ ಮೂರ್ತಿ ಕಲಾದವಿದರಾದ ಶಶಿ ಭಾರೀಘಾಟ್, ಆದಿವಾಸಿ ಹಕ್ಕುಗಳ ಸಮಿತಿ ಪರವಾಗಿ ಎಸ್ .ವೈ ಗುರುಶಾಂತ್ ಹಾಗೂ ಪ್ರಸನ್ನರ ದೇಶಿ ಅಂಗಡಿಯಲ್ಲಿ ಹಿಂದೆ ಕೆಲ ವರ್ಷ ಕೆಲಸ ಮಾಡಿದ ನನ್ನ ಹೆಂಡತಿ ಲತಾ ಕೂಡ ಕೆಲ ಹೊತ್ತು ಭಾಗವಹಿಸಿ ಪ್ರಸನ್ನರ ಹೋರಾಟಕ್ಕೆ ಬೆಂಬಲಿಸಿದೆವು.
ದೈತ್ಯಾಕಾರದ ಹಾಗೂ ಏಕಸ್ವಾಮ್ಯ ಬಂಡವಾಳಿಗರ ಕೈಗೆ ಸಿಲುಕಿ ನಲುಗುತ್ತಿರುವ ಭಾರತದ ಆರ್ಥಿಕತೆಯು ಈಗ ಉದ್ಯೋಗ ನಾಶದ ಕಡೆ ಹೆಜ್ಜೆ ಹಾಕಿದೆ.
ಹೀಗೆ ಸಾಗುತ್ತಿರುವ ಈ ಆರ್ಥಿಕತೆಯು ಮಾನವನ ಬದುಕಿಗೂ ಪರಿಸರಕ್ಕೂ ಮಹಾ ಹೊಡೆತ ನೀಡುತ್ತಿದೆ. ಮತ್ತೊಂದಡೆ ಪರಿಸರವನ್ನು ತನ್ನ ಲಾಭಕೋರತನ್ನಕ್ಕಾಗಿ ಲೂಟಿ ಮಾಡುತ್ತಿದೆ. ಇದು ಭವಿಷ್ಯದ ಭಾರತ ಮತ್ತು ಯುವಜನರು ಹಾಗೂ ಪರಿಸರ ಉಳಿವಿನ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ
ಹೀಗಾಗಿ ಗ್ರಾಮ ಸ್ವರಾಜ್ಯ ದ ಈ ಸತ್ಯಾಗ್ರಹ ವನ್ನು ಬೆಂಬಲಿಸಬೇಕಿದ.