ರಾಯಚೂರು:
ರಾಯಚೂರಿನ ನಗರದಲ್ಲಿ ನಿಜಲಿಂಗಪ್ಪ ಕಾಲನಿಯಲ್ಲಿರುವ ಆರ್ ಐ ಓ ಫ್ರೀ ಸ್ಕೂಲ್ ನಲ್ಲಿ ಬಕ್ರೀದ್ದ ಹಬ್ಬದಂದು ಶಾಲೆಯಲ್ಲಿ ಹಿಂದೂಯೆತರ ಶಿಕ್ಷಕಿಯೊಬ್ಬರು ಎಲ್ ಕೆ ಜಿ ಯು ಕೆ ಜಿ ವಿದ್ಯಾರ್ಥಿಗಳಿಗೆ ನಮಾಜ್ ಮಾಡುವ ವಿಧಾನ ಹೇಳಿಕೊಟ್ಟಿದ್ದರು. ವಿದ್ಯಾರ್ಥಿಗಳು ಸಾಮೂಹಿಕವಾಗಿ ನಮಾಜ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ನಂತರ ಈ ವಿಡಿಯೋವನ್ನು ಪೋಷಕರಿಗೆ ಕಳುಹಿಸಲಾಗಿದೆ. ವಿಡಿಯೋ ನೋಡಿದ ಹಿಂದೂ ಪೋಷಕರು ಅಸಮಾಧಾನ ಹೊರ ಹಾಕಿದ್ದಾರೆ. ಈ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳು ಶಾಲೆಯ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈವರೆಗೂ ಶಾಲಾ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಐದು ಗ್ಯಾರಂಟಿ ಜಾರಿಗೆ ತರಲು ಒತ್ತಾಯಿಸಿ ಪ್ರತಿಭಟನೆ-ಯಾರ ನೇತೃತ್ವದಲ್ಲಿ ?
ಬುಡಕಟ್ಟು ಜನರ ವಿಕಾಸಕ್ಕೆ ದಾರಿ ತೋರಿಸಿ: – ರಾಷ್ಟ್ರಪತಿ ದ್ರೌಪದಿ ಮುರ್ಮು




