Friday, March 14, 2025

Latest Posts

ನಿಗಮ ಮಂಡಳಿಯ ಗಾದಿಗಾಗಿ ನಡೆಯುತ್ತಿದೆ ಬಿಗ್ ಫೈಟ್: ಟಿಕೆಟ್ ತಪ್ಪಿದವರ ಸರ್ಕಸ್..!

- Advertisement -

District News: ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ಮುಗಿಯಿತು. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿಯನ್ನೂ ಹಿಡಿಯಿತು. ಈ ಬೆಳವಣಿಗೆ ಜೊತೆಗೆ ಸಚಿವ ಸಂಪುಟ ವಿಸ್ತರಣೆ ಕೂಡ ನಡೆದು ಹೋಯಿತು. ಇದರ ಬೆನ್ನಲ್ಲೇ ಪ್ರಮುಖ ನಿಗಮ ಮಂಡಳಿ ಗಾದಿಗೆ ಬೇಡಿಕೆ ಹೆಚ್ಚಿದೆ.

ಹೌದು.. ಧಾರವಾಡ ಜಿಲ್ಲೆಯ ಸ್ಥಳೀಯ ಕಾಂಗ್ರೆಸ್ ನಾಯಕರು ನಿಗಮ ಮಂಡಳಿಯ ಗಾದಿಗಾಗಿ ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ. ಇದರಲ್ಲಿ ಟಿಕೆಟ್‌ ಕೈತಪ್ಪಿದ್ದ ಕೈ ಮುಖಂಡರು ಕೂಡ ಇರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಧಾರವಾಡ ಜಿಲ್ಲೆಯ ಹತ್ತಕ್ಕೂ ಹೆಚ್ಚು ಕೈ ಮುಖಂಡರಿಂದ ನಿಗಮ ಮಂಡಳಿಗೆ ಫೈಟ್ ನಡೆದಿದೆ.

ಸಿದ್ಧರಾಮಯ್ಯ ಹಾಗೂ ಡಿಕೆಶಿ ಬಣದಲ್ಲಿ ಗುರುತಿಸಿಕೊಂಡಿರುವ ಸ್ಥಳೀಯ ಮುಖಂಡರಿಂದ ನಿಗಮ ಮಂಡಳಿಗೆ ಲಾಬಿ ನಡೆಸಿದ್ದು, ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲೇ ಬೀಡು ಬಿಟ್ಟು ನಿಗಮ‌ಮಂಡಳಿಗೆ ಫೈಟ್ ನಡೆಸಿದ್ದಾರೆ. ಪ್ರಮುಖ ನಿಗಮ ಮಂಡಳಿಗಳಿಗೆ ಪಟ್ಟು ಹಿಡಿದು ಕುಳಿತಿರೋ ಪ್ರಮುಖ‌ ಮುಖಂಡರು, ಹೈ ಕಮಾಂಡ್ ಮನವೊಲಿಕೆಗೆ ಮುಂದಾಗಿದ್ದಾರೆ.

ಇನ್ನೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಗೆ ಟಿಕೆಟ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್, ನಾಗರಾಜ್ ಗೌರಿ, ಅಲ್ತಾಪ್ ಕಿತ್ತೂರ ಸೇರಿದಂತೆ ಪ್ರಮುಖ‌ ಮುಖಂಡರಿಂದ ಲಾಬಿ ನಡೆದಿದೆ. ತಮ್ಮ ತಮ್ಮ ನಾಯಕರ ಮೂಲಕ ನಿಗಮ ಮಂಡಳಿ ಗಿಟ್ಟಿಸಿಕೊಳ್ಳಲು ಕಸರತ್ತು ನಡೆಸಿರೋ ಮುಖಂಡರು, ಬೆಂಗಳೂರಿನಲ್ಲಿಯೇ ಆಂತರಿಕ ಕಸರತ್ತು ನಡೆಸಿದ್ದಾರೆ.

ಒಟ್ಟಿನಲ್ಲಿ ಪ್ರಮುಖ ನಿಗಮ ಮಂಡಳಿಗಳ ಮೇಲೆ ಕಣ್ಣಿಡುವ ಮೂಲಕ ಆಂತರಿಕ ಫೈಟ್ ಗೆ ಮುಂದಾದ ಮುಖಂಡರು, ಹು-ಧಾ ಪೂರ್ವ, ಪಶ್ಚಿಮ‌ ಹಾಗೂ ಸೆಂಟ್ರಲ್ ಸೇರಿದಂತೆ ವಿವಿಧ ಕ್ಷೇತ್ರಗಳ ಕೈ ಮುಖಂಡರಿಂದ ನಿಗಮ ಮಂಡಳಿಯ ಮೇಲೆ ಕಣ್ಣು ಬಿದ್ದಿದೆ.

ಸೀಟ್ ಹಿಡಿಯಲು ವಿದ್ಯಾರ್ಥಿಗಳ ಸರ್ಕಸ್: ವಿಂಡೋ ರಾಡ್ ನಿಂದ ಕೈಗೆ ಹೊಡೆತ..!

ಅವಳಿನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ: ದಂಡ ವಿಧಿಸಿದ ಪಾಲಿಕೆ ಅಧಿಕಾರಿಗಳು

30 ವರ್ಷ ಭಾರತಾಂಬೆಯ ಸೇವೆ ಸಲ್ಲಿಸಿ ಬಂದ ಯೋಧನಿಗೆ ಗ್ರಾಮದಲ್ಲಿ ಅದ್ದೂರಿ ಸಂಭ್ರಮ

- Advertisement -

Latest Posts

Don't Miss