special story:
ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿ ಕಲ್ಲಿನ ಮೂರ್ತಿ. ಕಟ್ಟಿಗೆಯಿಂದ ಮಾಡಿದ ಮೂರ್ತಿಗಳನ್ನು ಇಟ್ಟು ಪೂಜಿಸುವುದನ್ನು ನೊಡಿದ್ದೇವೆ , ಆದರೆ ಇಲ್ಲೊಂದು ದೇವಾಲಯವಿದೆ ಈ ದೇವಾಲಯದಲ್ಲಿ ವಿಚಿತ್ರವಾಗಿ ದೇವರ ಪೂಜೆಯನ್ನು ಮಾಡಲಾಗುತ್ತದೆ. ಅದೇನೆಂದರೆ ನಾವು ಹೇಳ್ತಿವಿ ಕೇಳಿ.
ಪುರಿಯಲ್ಲಿರುವ ರಾಮಚಂಡಿ ದೇವಾಲಯವು ಶ್ರೀ ಮಾತಾ ದುರ್ಗಾದೇವಿಯ ಅವತಾರವಾಗಿರುವ ಈ ದೇವಾಲಯದಲ್ಲಿ ತಿಮಿಂಗಲ ಮೂಳೆಗಳನ್ನು ದೇವಸ್ಥಾನದ ಗರ್ಭಗುಡಿಯಲ್ಲಿ ಇಟ್ಟು ಪುರಾತನ ಕಾಲದಿಂದಲೂ ಪೂಜಿಸಿಕೊಂಡು ಬಂದಿದ್ದಾರೆ. ಇನ್ನು ಈ ವಿಶೇಷ ಪೂಜೆ ಮಾಡಲು ಕಾರಣ ಏನೆಂದು ನಿಮಗೆ ಗೊತ್ತಾ.
ದೇವಸ್ಥಾನದ ನಿರ್ಮಾಣದ ಸಮಯದಲ್ಲಿ ಕಡಲ ತೀರದಲ್ಲಿ ಈ ತಿಮಿಂಗಲು ಸಿಕ್ಕಿ ಹಾಕಿಕೊಂಡಿತ್ತಂತೆ ಅದನ್ನು ಗ್ರಾಮಸ್ಥರು ದೇವಸ್ಥಾನದಲ್ಲಿ ಇರಿಸಿ ದುರ್ಗಾದೇವಿಯ ಪ್ರತಿರೂಪದಂತೆ ಪುರಾತನ ಕಾಲದಿಂದಲೂ ಪೂಜಿಸಿಕೊಂಡು ಬಂದಿದ್ದಾರೆ.
ಪುರಿಯಿಂದ ಮರೈನ್ ಡ್ರೈವ್ ರಸ್ತೆಯಲ್ಲಿ ಕೋನಾರ್ಕ್‌ಗೆ 7 ಕಿಲೋಮೀಟರ್ ಮೊದಲೇ ಇದ್ದು, ಈ ದೇವಾಲಯವು ಕೋನಾರ್ಕ್‌ನ ಪ್ರಧಾನ ದೇವತೆಯಾದ ರಾಮಚಂಡಿ ದೇವಿಗೆ ಸಮರ್ಪಿತವಾಗಿದೆ. ವಾಸ್ತುಶಿಲ್ಪದ ದೃಷ್ಟಿಯಿಂದ ಇದು ಹೆಚ್ಚು ಮಹತ್ವದ್ದಾಗಿಲ್ಲದಿದ್ದರೂ, ಪುರಿಯ ಪ್ರಸಿದ್ಧ ಸಕ್ತ ಪೀಠಗಳಲ್ಲಿ ಒಂದಾಗಿರುವುದರಿಂದ ಇದು ಹೆಚ್ಚಿನ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ.
10ಕೋಟಿ ರೂ.ಗೆ ಅಧಿಕಾರಿಗಳ ವರ್ಗಾವಣೆ..! ಏನಿದು ಹೆಚ್.ಡಿ.ಕೆ ಹೊಸ ಬಾಂಬ್..?!