ರಾಂಚಿ: ಎರಡು ದಿನಗಳ ಹಿಂದೆ ದರ್ಭಾಂಗದ ದೇವಸ್ಥಾನಕ್ಕೆ ತೆರಳಿದ್ದ 10 ಜನರ ಪೈಕಿ ಆರು ಜನರ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.ಎದುರಿಗೆ ಬರುತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಬಾವಿಗೆ ಬಿದ್ದ ಕಾರಿನಲ್ಲಿದ್ದ ಆರು ಜನ ದುರ್ಮರಣ ಹೊಂದಿದ್ದಾರೆ.
ಜಾರ್ಖಾಂಡ್ ನ ಹಜಾರಿಬಾಗ್ ಜಿಲ್ಲೆಯ ಪದ್ಮಾ ಪೋಲಿಸ್ ಠಾಣಾ ವ್ಯಾಪ್ತಿಗೆ ಬರುವ ರೋಗಿ ಗ್ರಾಮದ ಬಳಿ ದೇವಸ್ಥಾನದಿಂದ ವಾಪಸ್ ಟಾಟ ಸುಮೋದಲ್ಲಿ 10 ಜನರು ಪ್ರಯಾಣ ಬೆಳೆಸಿದ್ದರು. ಈ ಸ್ಥಳದಲ್ಲಿ ವೇಗವಾಗಿ ಬರುತಿದ್ದ ಟಾಟ ಸುಮೋ ಕಾರು ಎದುರಿಗೆ ಬರುತಿದ್ದ ಬೈಕ್ ಗೆ ಡಿಕ್ಕಿ ಆಗುವುದನ್ನು ತಪ್ಪಿಸಲಿ ಹೋಗಿ ಬಾವಿಗೆ ಬಿದ್ದ ಪರಿಣಾಮ ಹತ್ತು ಜನರಲ್ಲಿ 4 ಜನ ಗಂಡು ಮಕ್ಕಳು ಮತ್ತು ಒಬ್ಬ ಮಹಿಳೆ ಹಾಗೂ ಒಂದು ಮಗು ಸೇರಿ ಆರು ಜನ ಸ್ಥಳದಲ್ಲೇ ಅಪ್ಪಚ್ಚಿಯಾಗಿ ದುರ್ಮರಣ ಹೊಂದಿದ್ದಾರೆ. ಇನ್ನುಳಿದ ನಾಲ್ಕು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಿಯರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ, ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಅಪಘಾತಕ್ಕೀಡಾದವರನ್ನು ಮಂಡೈ ಗ್ರಾಮದವರೆಂದು ಗುರುತಿಸಲಾಗಿದೆ ಎಂದು ಹಜಾರಿಭಾಗ್ ಎಸ್ಪಿ ಮನೋಜ್ ರತನ್ ಚೌದಿ ತಿಳಿಸಿದ್ದಾರೆ.
ಮಹಿಳಾ ವಿದ್ಯಾಪೀಠದ ವಿದ್ಯಾರ್ಥಿಗಳ ಹಾಸ್ಟೆಲ್ ಗೊಂದಲ: ಹಣ ಪಾವತಿಗೆ ಪಾಲಕರ ವಿರೋಧ…!