Hubballi News: ಹುಬ್ಬಳ್ಳಿ:ಸಿದ್ಧರಾಮಯ್ಯನವರು ಮಂಡಿಸಿರುವ ಬಜೆಟ್ ಪ್ರಾದೇಶಿಕ ಅಸಮತೋಲನ ಹೊರತುಪಡಿಸಿದರೇ ಇದೊಂದು ಉತ್ತಮ ಬಜೆಟ್ ಎಂದು ಚಾರ್ಟರ್ಡ್ ಅಕೌಂಟೆಂಟ್ ಶೇಷಗಿರಿ ಕುಲಕರ್ಣಿ ಹೇಳಿದರು.
ಬಜೆಟ್ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿ ಅವರು, ಬಜೆಟ್ ನಲ್ಲಿ ಪ್ರಾದೇಶಿಕ ಅಸಮಾನತೆಯಿದೆ. ಸಿದ್ದರಾಮಯ್ಯ ಬರೀ ಬೆಂಗಳೂರನ್ನು ಮಾತ್ರ ಅಭಿವೃದ್ಧಿಪಡಿಸಲು ಬಜೆಟ್ ನೀಡಿದ್ದಾರೆ ಈ ಭಾಗದ ಬಗ್ಗೆಯೂ ಸರ್ಕಾರ ಗಮನ ಕೊಡಬೇಕು ಎಂದರು.
ಬೆಂಗಳೂರನ್ನು ಹೊರತುಪಡಿಸಿ ಉಳಿದ ಕರ್ನಾಟಕದ ಯಾವುದೇ ಭಾಗದಲ್ಲಿ ಕೈಗಾರಿಕೋದ್ಯಮಿ ಅಭಿವೃದ್ಧಿ ಹೊತ್ತು ನೀಡಿಲ್ಲ. ಎಲ್ಲಾ ಸರ್ಕಾರಗಳು ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಮರೆಯುತ್ತಿದ್ದಾರೆ. ಪ್ರಾದೇಶಿಕ ಅಸಮತೋಲನದಿಂದ ಕೂಡಿದ ಬಜೆಟ್ ಇದಾಗಿದೆ ಎಂದು ಅವರು ಹೇಳಿದರು.
ಎಲ್ಲಾ ಯೋಜನೆ ಬೆಂಗಳೂರಿಗೆ ಅನೌನ್ಸ್ ಮಾಡಿದ್ದಾರೆ. ಕರ್ನಾಟಕದ ಇತರ ಭಾಗಗಳು ಹೇಗೆ ಬೆಳವಣಿಗೆ ಆಗಬೇಕು ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಲ್ಲದೇ ಸೆಮಿ ಕಂಡಕ್ಟರ್ ಬಿಜಿನೆಸ್ ಹುಬ್ಬಳ್ಳಿ, ಬೆಳಗಾವಿ ಭಾಗಕ್ಕೆ ಕೊಡಬೇಕಿತ್ತು ಎಂದು ಸಲಹೆ ನೀಡಿದರು.
ಇನ್ನೂ ಕೃಷಿ ಕಾಯಿದೆ ತಿದ್ದುಪಡಿ ಮಸೂದೆ ವಾಪಸ್ಸು ಪಡೆದಿದ್ದಾರೆ. ಇದೊಂದು ಸ್ವಾಗತಾರ್ಹವಾಗಿದೆ. ಒಟ್ಟಾರೆಯಾಗಿ ಜನರಿಗೆ ಹೊರೆಯಾಗದ ರೀತಿಯಲ್ಲಿ ಮಾಡಿರುವುದು ಸ್ವಾಗತಾರ್ಹ ಎಂದರು.
ಸಾರ್ವಜನಿಕರಿಗೆ ಹೊರೆಯಾಗದ ಬಜೆಟ್ ಸ್ವಾಗತಾರ್ಹ: ಕೆಸಿಸಿಐ ಅಧ್ಯಕ್ಷ ಅಭಿಮತ