Friday, April 18, 2025

Latest Posts

Dharawad news:“ನಿಮ್ಮಾಕೀ” ಎಲ್ಲಿರಬೇಕು..!ಪೊಲೀಸರು ಹೇಳ್ತಾರೆ ಕೇಳಿ

- Advertisement -

ಧಾರವಾಡ: ಸಾರ್ವಜನಿಕರಿಗೆ ಕಾನೂನು ತಿಳುವಳಿಕೆ ಮೂಡಿಸಲು ಪೊಲೀಸರು ಹಗಲಿರುಳು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ, ಕೆಲವರು ಮಾತ್ರ ಕಾನೂನು ಉಲ್ಲಂಘನೆ ಮಾಡುವುದೇ ಹೆಚ್ಚು. ಹಾಗಾಗಿಯೇ ಪೊಲೀಸರು ಮತ್ತಷ್ಟು ಕಾಳಜಿ ತೋರಿಸಿ ಕಾನೂನು ತಿಳಿಸಲು ಮುಂದಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಶಬ್ದಗಳಿಂದ ತಿಳುವಳಿಕೆ ನೀಡಲು ಮುಂದಾದ ಹುಬ್ಬಳ್ಳಿ-ಧಾರವಾಡ ಪೊಲೀಸರು “ನಿಮ್ಮಾಕೀ” ಎಲ್ಲಿರಬೇಕು… ಧಾರವಾಡ ಸಂಚಾರಿ ಠಾಣೆ ಪೊಲೀಸರು ಹೇಳಿದ್ದಾರೆ ನೋಡಿ….ಧಾರವಾಡದ ಸಂಚಾರಿ ಠಾಣೆ ಪೊಲೀಸರು ಮಾಡಿದ್ದೇನು..

ಧಾರವಾಡದ ಸಂಚಾರಿ ಠಾಣೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೈಕಿನ ಹಿಂಬದಿ ನಂಬರ್ ಪ್ಲೇಟ್ ಹಾಕದೇ ‘ನನ್ನಾಕಿ’ ಎಂದು ಬರೆದಿರುವುದು ಕಂಡು ಬಂದಿದೆ. ತಕ್ಷಣವೇ ಬೈಕ್‌ನ್ನ ವಶಕ್ಕೆ ಪಡೆದು ನಂಬರ್ ಪ್ಲೇಟ್ ಹಾಕಿಸಿ ಕಳಿಸಿದ್ದಾರೆ.


ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೊಲೀಸರು, ನನ್ನಾಕಿ ಹೆಸರು ಹೃದಯದಲ್ಲಿರಲಿ ಬೈಕಿನ ಮೇಲಲ್ಲ ಎಂದು ಹೇಳಿದ್ದಾರೆ.

ವಿಶೇಷವಾಗಿ ಜಾಗೃತಿ ಮೂಡಿಸಲು ಹುಬ್ಬಳ್ಳಿ -ಧಾರವಾಡ ಸಂಚಾರಿ ಠಾಣೆ ಪೊಲೀಸರು ಮುಂದಾಗಿದ್ದು, ಬೈಕ್ ಬಳಕೆದಾರರು ಎಚ್ಚರಿಕೆ ವಹಿಸಬೇಕಿದೆ.

ತಿಮಿಂಗಲ ಮೂಳೆಗಳಿಗೆ ಪೂಜೆ ಮಾಡುವ ದೇವಾಲಯ

ಈ 5 ಗುಣಗಳು ನಿಮ್ಮಲ್ಲಿದ್ದರೆ ನಿಮ್ಮ ಆರೋಗ್ಯ ಬೇಗ ಹಾಳಾಗುತ್ತದೆ..

ಕ್ರಮಬದ್ಧವಾಗಿ ಊಟ ಮಾಡುವ ವಿಧಾನದ ಬಗ್ಗೆ ಮಾಹಿತಿ..

- Advertisement -

Latest Posts

Don't Miss