Sunday, December 22, 2024

Latest Posts

ಎಡ, ಬಲ ಸಂಘರ್ಷ : ನಿರುದ್ಯೋಗ, ರೈತರ ಪಾಡು ಕೇಳೋರ್ಯಾರು..?

- Advertisement -

ಕರ್ನಾಟಕ ಟಿವಿ : ದೇಶದಲ್ಲಿ ಈಗ ಸಿಎಎ, ಎನ್ ಆರ್ ಸಿ, ಎನ್ ಪಿಆರ್ ಭಾರೀ ಗಲಾಟೆ ಗದ್ದಲಕ್ಕೆ ಕಾರಣವಾಗಿದೆ.. ಈ ನಡುವೆ ಕಳೆದೊಂಡು ವರ್ಷದಿಂದ ದೇಶಾದ್ಯಂತ ಕೋಟ್ಯಂತರ ಜನ ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ.. ಪ್ರತೀ ವರ್ಷ ಪದವಿ ಮುಗಿಸಿ ಕೆಲಸ ಸಿಗುತ್ತೆ ಅಂತ ಕಾಯ್ತಿರೋ ಕೋಟ್ಯಂತರ ಯುವ ಜನತೆ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ..  ಇತ್ತ 2000 ನೇ ಇಸವಿಯಲ್ಲಿ ಒಂದು ಊರಿನ 100ರಲ್ಲಿ 10 ಜನ ಮಾತ್ರ ನಗರ ಪ್ರದೇಶಕ್ಕೆ ಕೆಲಸ ಮಾಡಲು ಬರ್ತಿದ್ರು. ಉಳಿದ 90 ಮಂದಿ ವ್ಯವಸಾಯ ಮಾಡ್ತಿದ್ರು.. ಆದ್ರೀಗ 1000ರಲ್ಲಿ 90 ಮಂದಿ ನಗರ ಪ್ರದೇಶದಲ್ಲಿ ಯುವ ಜನತೆ ಕೆಲಸ ಮಾಡ್ತಿದೆ.. 10ರಷ್ಟು ಯುವ ಜನತೆ ವ್ಯವಸಾಯ ಮಾಡ್ತಿದೆ.. ಸಾವಿರಾರು   ಇಂಡಸ್ಟ್ರಿಗಳು ನಷ್ಟಕ್ಕೆ ಸಿಲುಕಿ ಬಾಗಿಲು ಬಂದ್ ಮಾಡ್ತಿವೆ.. ಇತ್ತ ವ್ಯವಸಾಯ ಬಿಟ್ಟು ನಗರ ಪ್ರದೇಶಕ್ಕೆ ತಮ್ಮ ಮಕ್ಕಳನ್ನ ಕಳುಹಿಸಿದ ರೈತರು ತಮ್ಮ ಮಕ್ಕಳನ್ನ ವಾಪಸ್ ವ್ಯವಸಾಯ ಮಾಡಲು ಕರೆಯಲು ಆಗದೆ.. ಮಕ್ಕಳೂ ನಿರುದ್ಯೋಗಿಗಳಾಗಿ ಒದ್ದಾಡವುದನ್ನ ನೋಡಲು ಆಗದ ಚಿಂತಿತರಾಗಿದ್ದಾರೆ.. ಆದ್ರೆ, ಸರ್ಕಾರ ಹಾಗೂ ವಿರೋಧ ಪಕ್ಷಗಳು ಜನರಿಗೆ ನಿಜವಾಗಿಯೂ ಬೇಕಿರುವ ವ್ಯವಸ್ಥೆ ಜಾರಿ ಮಾಡದೆ.. ಅನಗತ್ಯ ವಿಚಾರಗಳಗೆ ಮನ್ನಣೆ ಕೊಟ್ಟು ಪ್ರತಿಭಟನೆ ಮಾಡಿಕೊಂಡು ಸಾಮಾನ್ಯ ಜನರ ಧ್ವನಿಯಾಗದೆ ಭಾರತದ  ಬೆಳವಣಿಗೆ ಸರ್ವ ರೀತಿಯಲ್ಲೂ ಪತನದೆಡೆಗೆ ಸಾಗಿದೆ..

ಯಸ್ ವೀಕ್ಷಕರೇ ನಿಮ್ಮ ಪ್ರಕಾರ ದೇಶದಲ್ಲಿ ಯಾವ ವಿಚಾರದ ಬಗ್ಗೆ ಚರ್ಚೆಯಾಗಬೇಕು..? ನಿಜವಾಘಿರಯೂ ಯುವಜನತೆಗೆ, ರೈತರಿಗೆ ಸರ್ಕಾರ ಮಾಡಬೇಕಿರೋದು ಏನು ಅನ್ನೋದನ್ನ ಕಾಮೆಂಟ್ ಮಾಡಿ..  

- Advertisement -

Latest Posts

Don't Miss