Sunday, May 11, 2025

Latest Posts

Gwalior- ಪಾದ ನೆಕ್ಕು ಎಂದು ಬಲವಂತ ಮಾಡಿದ ಯುವಕರು

- Advertisement -

ಮಧ್ಯಪ್ರದೇಶ: ಗ್ವಾಲಿಯಾರ್ ಜಿಲ್ಲೆಯ ದಾಬ್ರಾ ಪಟ್ಟಣದಲ್ಲಿ ನಡೆದಿರುವ ಘಟನೆ.ಯುವಕನೊಬ್ಬನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುವಾಗ ಇಬ್ಬರು ಯುವಕರು ಸೇರಿ ತಮ್ಮ ಪಾದ ನೆಕ್ಕುವಂತೆ ಹಲ್ಲೆ ಮಾಡಿದ್ದಾರೆ.ಆಯುವಕ ಪಾದಗಳನ್ನು ನೆಕ್ಕಲು ನಿರಾಕರಿಸಿದಾಗ ಅವನಿಗೆ ಯುವಕರಿಬ್ಬರು ಕಪಾಳಕ್ಕೆ ಹೊಡೆದದ್ದು ಮತ್ತು ಚಪ್ಪಲಿಯಿಂದ ಕೆನ್ನೆಗೆ ಬಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಯುವಕನಿಗೆ ಪದೇ ಪದೇ ಬಲವಂತವಾಗಿ ಪಾದ ನೆಕ್ಕುವಂತೆ ಹೇಳಿದಾಗ ಆಯುವಕ ನಿರಾಕರಿಸಿದ್ದಕ್ಕೆ   ಕೆನ್ನೆಗೆ ಬಾರಿಸಿರುವುದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಮತ್ತು ಚಪ್ಪಲಿಯಿಂದ ಹೊಡೆದಿರುವದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಈ ವಿಡಿಯೋ ಈಗ ಪೋಲಿಸರಿಗೆ ಸಿಕ್ಕಿದ್ದು ವಿಧಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿಗೆ ಮಧ್ಯಪ್ರದೇಶದಲ್ಲಿ ಇಂತಹ ಅಹಿತಕರ ಘಟನೆಗಳು ಪದೇ ಪದೇ ಮರುಕಳುಸುತ್ತಿವೆ . ಈ ಹಿಂದೆ ಆದಿವಾಸಿ ವ್ಯಕ್ತಿಯ ಮೇಲೆ ಬಿಜಿಪಿ ಮುಖಂಡನೊಬ್ಬ ಮೂತ್ರ ಮಾಡಿರುವುದು ಮತ್ತು ಆದಿವಾಸಿ ಯುವತಿಗೆ ಚುಡಾಯಿಸಿದಕ್ಕೆ ಆಸಿವಾಸಿಗಳು ಚುಡಾಯಿಸಿದ ಯುವಕನಿಗೆ ಮಲತಿನ್ನಿಸಿ ಊರಲ್ಲಿ ಮೆರವಣಿಗೆ  ಮಾಡಿರುವುದು ಬೆಳಕಿಗೆ ಬಂದಿವೆ.

- Advertisement -

Latest Posts

Don't Miss