State News: ಕರ್ನಾಟಕದಲ್ಲಿ ಇದೀಗ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ದುಸ್ಥಿತಿ ಬಂದೊದಗಿದೆ. 55 ಸರ್ಕಾರಿ ಪ್ರಾಥಮಿಕ ಶಾಲೆಗಲ್ಲಿನ ಒಂದನೇ ತರಗತಿಗೆ ಶೂನ್ಯ ದಾಖಲಾತಿಗಳಾಗಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
ಎರಡು ಜಿಲ್ಲೆಗಳ 55 ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗಿವೆ. ಅದರಲ್ಲೂ ದಕ್ಷಿಣ ಕನ್ನಡದ 24 ಶಾಲೆಗಳಲ್ಲಿ 1ನೇ ತರಗತಿಗೆ ಶೂನ್ಯ ದಾಖಲಾತಿ ಆಗಿವೆ. ಪುತ್ತೂರು ತಾಲೂಕಿನ 2, ಬಂಟ್ವಾಳ 4,ಬೆಳ್ತಂಗಡಿ 3, ಮಂಗಳೂರು ಉತ್ತರ 2, ಮಂಗಳೂರು ದಕ್ಷಿಣ 2, ಮೂಡಬಿದಿರೆ 3 ಸುಳ್ಯ 8 ಶಾಲೆಗಳಲ್ಲಿ ದಾಖಲಾತಿ ಶೂನ್ಯವಾಗಿದೆ.
ಇವೆಲ್ಲವುಗಳೂ ಸೇರಿ ಒಟ್ಟಾರೆ 55 ಶಾಲೆಗಳಲ್ಲಿ 1ನೇ ತರಗತಿಗೆ ಶೂನ್ಯ ದಾಖಲಾತಿ ಆಗಿವೆ. ದಕ್ಷಿಣ ಕನ್ನಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದೇಶಕ ಮಾತನಾಡಿದ ಆರ್ ದಯಾನಂದ್ ಮಾತನಾಡಿ ಇನ್ನೂ ದಾಖಲಾತಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ದಾಖಲಾಗುವ ನಿರೀಕ್ಷೆ ಇದೆ. ಡೇಟಾ ಕ್ರೂಢೀಕರಣ ನಡೆಯಯುತ್ತಿದೆ ಎಂದರು.
U.T Khadar : ಮೀನುಗಾರರ ಸಮಸ್ಯೆ ಪರಿಹಾರಕ್ಕೆ ನಾನು ಸದಾ ಸಿದ್ಧ: ಯು.ಟಿ ಖಾದರ್

