Political News: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಗೆಲುವನ್ನು ಸಾಧಿಸಿ ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಚುನಾವಣೆಗೂ ಮುಂಚೆ ಭಾರತ್ ಜೋಡೋ ಯಾತ್ರೆ ದೇಶದಾದ್ಯಂತ ಭರ್ಜರಿಯಾಗಿಯೇ ನಡೆದಿತ್ತು. ರಾಹುಲ್ ಗಾಂಧಿ ಅದಾಗಲೇ ಕಾಂಗ್ರೆಸ್ ಗೆಲ್ಲುವ ಮುನ್ಸೂಚನೆ ನೀಡಿದ್ದರು.
ಇದೀಗ ರಾಹುಲ್ ಗಾಂಧಿಗೆ ಹಿನ್ನಡೆಯಾಗಿದೆ. ಕಾರಣ ಗುಜರಾತ್ ಕೋರ್ಟ್ ಅವರ ಮಾನನಷ್ಟ ಅರ್ಜಿಯನ್ನು ವಜಾ ಮಾಡಿದ್ದರು.
ಈ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆಶಿ ಮಾಧ್ಯಮದ ಮುಂದೆ ಕೆಲವು ಮಾತುಗಳನ್ನಾಡಿದ್ದಾರೆ. ರಾಹುಲ್ ಗಾಂಧಿಯನ್ನು ಮುಗಿಸಲು ಮಹಾ ಷಢ್ಯಂತರ ನಡೆಸಲಾಗುತ್ತಿದೆ. ಅದಕ್ಕಾಗಿ ವಿಪಕ್ಷಗಳು ಶ್ರಮಿಸುತ್ತಿದೆ. ಮುಂದಿನ ಲೋಕ ಸಭೆ ಚುನಾವಣೆ ಬರುತ್ತಿರುವ ಕಾರಣ ಈ ಷಢ್ಯಂತ್ರ ನಡೆಸಲಾಗುತ್ತಿದೆ.ಎಂಬುವುದಾಗಿ ಡಿಕೆ ಶಿವಕುಮಾರ್ ಹೇಳಿಕೆಯನ್ನು ನೀಡಿದ್ದಾರೆ. ಈ ಕುರಿತು ಮೌನ ಸತ್ಯಾಗ್ರಹ ಮಾಡುತ್ತೇವೆ ರಾಹುಲ್ ಗಾಂಧಿ ಪರ ನಾವು ನಿಲ್ಲುತ್ತೇವೆ ಎಂದು ತಿಳಿಸಿದರು.




