ಕೋಲಾರ:ಬೆಳಗಾವಿ ಜಿಲ್ಲೆಯ ಜೈನ ಮುನಿಗಳ ಹತ್ಯೆ ಘಟನೆ ನಡೆಯಬಾರದಿತ್ತು. ಆದ್ರೆ ನಡೆದು ಹೋಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಸರ್ವಸಂಗ ಪರಿತ್ಯಾಗಿಗಳಿಗೂ ಕಂಟಕ ಇದೆಯೆಂದರೆ ಜನ ಇನ್ಯಾರನ್ನು ಬಿಡ್ತಾರೆ. ಮನುಷ್ಯನ ಕ್ರೂರಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕೋಲಾರ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದವರೊಂದಿಗೆ ಕೋಡಿಮಠದ ಶ್ರೀಗಳು ಮಾತನಾಡಿದರು. ಈ ವೇಳೆ ಬೆಳಗಾವಿಯ ಜೈನಮುನಿ 108 ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಘಟನೆಯನ್ನು ಖಂಡಿಸಿದ್ದಾರೆ.
ಜಗತ್ತಿನಲ್ಲಿ ಗೋವು ಇಲ್ಲದೆ ಏನು ಇಲ್ಲ, ಗೋವು ಬೇಕೇ ಬೇಕು:
ಇನ್ನು ಗೋವು ಹತ್ಯೆ ನಿಷೇಧ ಬಗ್ಗೆ ಪ್ರತಿಕ್ರಿಯೆ ನೀಡಿದ ಕೋಡಿಮಠದ ಶ್ರೀಗಳು, ಜಗತ್ತಿನಾದ್ಯಂತ ಗೋವು ಇಲ್ಲದೆ ಏನೂ ಇಲ್ಲ. ಗೋವು ಬೇಕೇ ಬೇಕು. ಸಕಲವು ಗೋವಿನಲ್ಲಿಯೇ ಇದೆ. ಗೋವು ಬೆಳೆಯಲಿ. ಅದರಿಂದ ಸಂಪತ್ತಾಗುತ್ತದೆ. ಭೂಮಿ ಬೆಳೆಯುತ್ತದೆ. ಮಳೆ ಬೆಳೆ ಬರುತ್ತದೆ. ಗೋವನ್ನು ದೇವತೆ ಎಂದು ನಂಬುತ್ತಿದ್ದಾರೆ. ಹಾಗಾಗಿ ಅದಕ್ಕೆ ದ್ರೋಹ ಆಗಬಾರದು ಎಂದರು.
ದೇಶದಲ್ಲಿ ಪ್ರಾಕೃತಿಕ ವಿಕೋಪಗಳು ಆಗುವ ಲಕ್ಷಣಗಳು ಹೆಚ್ಚಿವೆ:
ದೇಶದಲ್ಲಿ ಮುಂದೆಯೂ ಪ್ರಾಕೃತಿಕ ವಿಕೋಪಗಳು ಆಗುವ ಲಕ್ಷಣಗಳು ಇವೆ. ಪ್ರಾಕೃತಿಕವಾಗಿ, ಮಳೆಯಿಂದಾಗಿ, ಮನುಷ್ಯನ ಅಶಾಂತಿಯಿಂದಲೂ ಹಾಗೇ ರೋಗ ರುಜಿನಗಳು ಆಗುವ ಲಕ್ಷಣಗಳು ಹೆಚ್ಚಾಗಿವೆ ಎಂದರು. ಇನ್ನು ರಾಜಕೀಯದ ಬಗ್ಗೆ ಮಾತನಾಡಿದ ಶ್ರೀಗಳು, ಮಗುವು ತಾಯಿಯ ಹಾಲು ಕುಡಿಯುತ್ತಿದೆ, ಇನ್ನು ಅನ್ನ ತಿನ್ನೋದು ಕಲಿತಿಲ್ಲ. ಮಗುವು ಚೆನ್ನಾಗಿ ಬೆಳೆಯಲಿ. ಯಾವ ತೊಂದರೆಯೂ ಇಲ್ಲ ಎಂದರು. ನಾಡಿನಾದ್ಯಂತ ಚಾಮುಂಡೇಶ್ವರಿಯ ವರ್ಧಂತಿಯನ್ನು ಜಾತಿ, ಮತ, ಪಂತ ಭೇದವಿಲ್ಲದೆ ಭಕ್ತಿಯಿಂದ ಜನರು ಆಚರಿಸುತ್ತಿದ್ದಾರೆ. ಇಂದು ಎಲ್ಲಾ ರಂಗಗಳಲ್ಲಿಯೂ ಅಶಾಂತಿ ಇದೆ. ನೆಮ್ಮದಿಯಿಲ್ಲ, ಸುಖವಿಲ್ಲ. ಮನುಷ್ಯ ದುಃಖದಲ್ಲಿ ಇದ್ದು, ಕಳವಳಕಾರಿಯಾಗಿದ್ದಾನೆ. ಹಾಗಾಗಿ ದೇವಿಯ ಪೂಜೆ ಮಾಡುವುದರಿಂದ ನೆಮ್ಮದಿ ಸಿಗುತ್ತದೆ ಎಂದರು.
Gunadharnand Maharaj : ಅಮರಣಾಂತ ಉಪವಾಸಕ್ಕೆ ಶತಸಿದ್ಧ : ಜೈನ ಮುನಿ ಗುಣಧರನಂದಿ ಮಹರಾಜ್ ಸ್ವಾಮೀಜಿ
Annabhagya Yojana : 3ನೇ ಗ್ಯಾರಂಟಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ