State News: ವಿಧಾನಸೌಧದಲ್ಲಿ ನಮಾಝ್ ಗೆ ಒಂದು ಕೊಠಡಿಗೆ ಅನುವು ಮಾಡಿಕೊಡಿ ಎಂಬುವುದಾಗಿ ಜೆಡಿಎಸ್ ಸದಸ್ಯರೊಬ್ಬರು ಮನವಿ ಮಾಡಿದ ವಿಚಾರವಾಗಿ ಶೀರಾಮ ಸೇನಾ ಸ್ಥಾಪಕ ಪ್ರಮೋದ್ ಮುತಾಲಿಕ್ ಗರಂ ಆಗಿದ್ದಾರೆ.
ವಿಧಾನ ಸೌಧ ಕಲಾಪದಲ್ಲಿ ಜೆಡಿಎಸ್ ಸದಸ್ಯ ಬಿಎಂ ಫಾರೂಕ್ ನಮಾಝ್ ಗಾಗಿ ವಿಧಾನ ಸೌಧದಲ್ಲಿ ಕೊಠಡಿ ಅಗತ್ಯವಿದೆ ಎಂಬುವುದಾಗಿ ಸ್ಪೀಕರ್ ಮುಂದೆ ಬೇಡಿಕೆ ಮುಂದಿಟ್ಟಿದ್ದರು. ಈ ವಿಚಾರವಾಗಿ ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಮಾಝ್ ಗೆ ಅದೇನು ಮೆಕ್ಕಾ ಮದೀನಾ ಅಂದುಕೊಂಡ್ರಾ..?! ವಿಧಾನ ಸೌಧದಂತಹ ಪವಿತ್ರ ದೇಗುಲದಲ್ಲಿ ನಮಾಝ್ ಮಾಡ್ತೀರಾ ನೀವು..?! ಇದೊಂದು ಡೇಂಜರಸ್ ಮಾನಸಿಕತೆ. ತಕ್ಷಣ ಆ ವರದಿಯನ್ನು ಕೈ ಬಿಡಬೇಕು ಅವರಿಗೆ ಶಿಕ್ಷೆಯಾಗಬೇಕು. ಎಂಬುವುದಾಗಿ ಮಾಧ್ಯಮದ ಮುಂದೆ ಮುತಾಲಿಕ್ ತಮ್ಮ ಅಭಿಪ್ರಾಯ ಹೇಳಿದರು.
B.M. Faruq : ನಮಾಝ್ ಮಾಡಲು ಕೊಠಡಿ ಕೊಡಿ..! ಜೆಡಿಎಸ್ ಸದಸ್ಯನ ಕೂಗು…?!



