ಕೇರಳ: ಬೀದಿನಾಯಿಗಳ ಹಾವಳಿಯಿಂದ ಜನರು ಹೈರಾಣಾಗಿರುವ ಘಟನೆಗಳು ಪ್ರತಿ ದಿನ ಸುದ್ದಿಗಳನ್ನು ಓದುತಿರುತ್ತೇವೆ ಹಲವಾರು ಜನರು ನಾಯಿಯನ್ನು ಕಚ್ಚಿಸಿಕೊಂಡು ಆಸ್ಪತ್ರೆ ಸೇರಿರುವ ಘಟನೆಗಳು ನಡೆದಿದೆ ಆದರೆ ಇಲ್ಲಿ ನಾಯಿಗಳ ಹಾವಳಿಯಿಂದ ಶಾಲೆಗ ರಜೆಯನ್ನೇ ಘೋಷಿಸಿದ್ದಾರೆ.
ಕೇರಳದ ಕೋಳಿಕ್ಕೋಡ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು ಬೀದಿ ನಾಯಿಗಳನ್ನು ಹಿಡಿಯುವಲ್ಲಿ ಪಂಚಾಯಿತಿ ಸಿಬ್ಬಂದ್ದಿಯವರು ಹೈರಾಣಾಗಿದ್ದಾರೆ.ಈಗಾಗಲೆ ಬೀದಿ ನಾಯಿಯಿಂದ 5 ಜನ ಕಚ್ಚಿಸಿಕೊಂಡು ಆಸ್ಪತ್ರೆ ದಾಖಲಾಗಿದ್ದಾರೆ ಗ್ರಾಮಸ್ಥರು ಮನೆಯ ಹೊರಗಡೆ ಬರಲು ಹೆದರುತಿದ್ದಾರೆ.
ಹಾಗಾಗಿ ಬೀದಿನಾಯಿಗಳನ್ನು ಒಂದು ವಾರದಲ್ಲಿ ಹಿಡಿಯಬೇಕೆಂದು ಪಣ ತೊಟ್ಟಿರುವ ಅಧಿಕಾರಿಗಳು ಶಾಲಾ ಮಕ್ಕಳಿಗೆ ನಾಯಿಗಳಿಂದ ಆಗುವ ಅನಾಹುತವನ್ನು ತಪ್ಪಿಸಲು ಒಂದು ವಾರ ಶಾಲೆಗೆ ಸ್ಥಳಿಯ ರಜೆ ಘೋಷಣೆ ಮಾಡಿದ್ದಾರೆ. ಹಾಗೂ ನೆರೆಗಾ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.