ಕರ್ನಾಟಕ ಟಿವಿ : ನಿನ್ನೆ ರಾಮನಗರ ಜಿಲ್ಲೆ ಕೇತಗಾನಹಳ್ಳಿಗೆ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್ ಹಾಗೂ ರವಿಕೃಷ್ಣಾ ರೆಡ್ಡಿ ತಂಡದ ಸದಸ್ಯರ ಮೇಲೆ ನಡೆದ ಹಲ್ಲೆಗೆ ಆಕ್ರೋಶ ವ್ಯಕ್ತವಾಗಿದೆ.. ಇಂದು ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್.ಆರ್ ಹಿರೇಮಠ್ ಹಾಗೂ ರವಿಕೃಷ್ಣಾ ರೆಡ್ಡಿ ಗೂಂಡಾಗಿರಿ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಈ ಕೂಡಲೇ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯ ಮಾಡಿದ್ರು.. ಈ ವೇಳೆ ಆರ್.ಟಿ.ಐ ಕಾರ್ಯಕರ್ತ ರವಿ ಕುಮಾರ್ ಕೆಂಚನಹಳ್ಳಿ ಸೇರಿದಂತೆ ರಾಮನಗರದ ರೈತ ಮುಖಂಡರು ಹಾಜರಿದ್ರು..
ನಿನ್ನೆ ಎಸ್.ಆರ್ ಹಿರೇಮಠ್ ತಂಡ ಭೇಟಿ ಕೊಟ್ಟಾಗ ಏನಾಯ್ತು..?
ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲಿಗರು ಎನ್ನಲಾದ ಕೆಲ ವ್ಯಕ್ತಿಗಳಿಂದ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹೀರೇಮಠ್ ಹಾಗೂ ತಂಡದ ಮೇಲೆ ಗೂಂಡಾಗಿರಿ ನಡೆದಿದೆ.. ಬಿಡದಿ ಹೋಬಳಿ ಕೇತಗಾನಹಳ್ಳಿ ಗ್ರಾಮದ ಗೋಮಾಳ ಜಮೀನು200 ಎಕರೆ ಭೂಮಿ ಕಬಳಿಸಿರುವ ಬಗ್ಗೆ SR.ಹಿರೇಮಠ್ ರವರು ಈ ಊರಿಗೆ ಭೇಟಿ ನೀಡಿದಾಗ ಮೊಟ್ಟೆ ಎಸೆದು ಅವಮಾನ ಮಾಡಿ ದೌರ್ಜನ್ಯ ಎಸಗಿದ್ದಾರೆ. ಕೆಲಅಕ್ರಮ ಭೂ ವ್ಯವಹಾರ ಸಂಬಂಧಿಸದಂತೆ ದಾಖಲಾತಿ ಸಂಗ್ರಹಿಸಲು ಸ್ವತಃ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್ ಹಾಗೂ ರವಿಕೃಷ್ಣಾ ರೆಡ್ಡಿ ಸೇರಿದಂತೆ ಕೆಲ ಸಾಮಾಜಿಕ ಕಾರ್ಯಕರ್ತರು ರಾಮನಗರ ಜಿಲ್ಲೆಯ ಕೇತಗಾನಹಳ್ಳಿಗೆ ತೆರಳಿದ್ರು.. ಈ ವೇಳೆ ಎಸ್.ಆರ್ ಹೀರೇಮಠ್ ತಂಡದ ಮೇಲೆ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಲ್ಲದೇ ದೊಣ್ಣೆಗಳಿಂದ ಹಲ್ಲೆ ಮಾಡಲು ಮುಂದಾದ್ರು. ಈ ವೇಳೆ ಕೆಲ ಕಿಡಿಗೇಡಿಗಳು ಮೊಟ್ಟೆ ಎಸೆದು ಅವಮಾನಿಸಿದ ಘಟನೆ ನಡೆದಿದೆ.. ಸ್ವತಃ ಈ ವಿಷಯವನ್ನ ಖಂಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ನಾನೇ ಎಸ್.ಆರ್ ಹೀರೇಮಠ್ ಅವರಿಗೆ ದಾಖಲೆ ಕೊಡ್ತಿದೆ..ಅವರ್ಯಾಕೆ ಅಲ್ಲಿಗೆ ಹೋಗಬೇಕಿತ್ತು ಅಂತ ಪ್ರತಿಕ್ರಿಯೆ ನೀಡಿದ್ದಾರೆ..