- Advertisement -
Yadagiri News: ಈಗಾಗಲೇ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಇದರಿಂದ ಕಂಡಕ್ಟರ್ ಆದಾರ್ ಕಾರ್ಡ್ ಚೆಕ್ ಮಾಡೋದ್ ಸಾಮಾನ್ಯವಾಗಿದೆ. ಆದರೆ ಯಾದಗಿರಿಯಲ್ಲಿ ಕಂಡಕ್ಟರ್ ಕಕ್ಕಾಬಿಕ್ಕಿಯಾಗಿದ್ದಾರೆ.
ಯಾದಗಿರಿಯ ಶಹಾಪುರ ತಾಲೂಕಿನ ತಡಬಿಡಿ ಗ್ರಾಮದಲ್ಲಿತೃತೀಯ ಲಿಂಗಿ ಒಬ್ಬರು ಪುರುಷರ ಬಟ್ಟೆ ಧರಿಸಿ ಪ್ರಯಾಣ ಮಾಡಿದ್ದಾರೆ. ಈ ವೇಳೆ ಉಚಿತ ಪ್ರಯಾಣ ಕೇಳಿದ್ದಾರೆ. ಕಂಡಕ್ಟರ್ ಆಧಾರ್ ಕಾರ್ಡ್ ಚೆಕ್ ಮಾಡಿದಾಗ ಕಂಡಕ್ಟರ್ ಕಕ್ಕಾಬಿಕ್ಕಿಯಾಗಿದ್ದಾರೆ. ಆದಾರ್ ನಲ್ಲಿ ಹೆಸರು ಲಕ್ಷ್ಮೀ ಎಂಬುವುದಾಗಿದ್ದು ಲಿಂಗ ಪುರುಷ ಎಂಬುವುದಾಗಿತ್ತು.
ಈ ವೇಳೆ ಪ್ರಶ್ನೆ ಮಾಡಿದ ಕಂಡಕ್ಟರ್ ಗೆ ಉತ್ತರ ದೊರೆತಿದ್ದೇ ತೃತೀಯ ಲಿಂಗಿ ಎಂದು. ನಂತರ ಆಕೆಗೆ ಉಚಿತ ಪ್ರಯಾಣಕ್ಕೆ ಕಂಡಕ್ಟರ್ ಅನುವು ಮಾಡಿ ಕೊಟ್ಟಿದ್ದಾರೆ.
- Advertisement -