Koragajja-ಹರಕೆಯಿಂದ ಕಳೆದು ಹೋದ ಹಣ ಸಿಕ್ಕವು

ಉಡುಪಿ- ಕರಾವಳಿ ಪ್ರದೇಶದ ಆರಾಧ್ಯ ದೈವವಾದ ಕೊರಗಜ್ಜ  ಕಳೆದು ಹೋಗಿರುವ  ಹಣ ಕೊರಗಜ್ಜನ ಪವಾಡದಿಂದ ಕೆಲವೇ ಗಂಟೆಗಳಲ್ಲಿ ಸಿಕ್ಕಿವೆ ಈ ಘಟನೆ ನಡೆದಿರುವುದು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಕುರುಡಿಂಜಿಯಲ್ಲಿ.

ಶಿವಮೊಗ್ಗ ಮೂಲದ ಗಣೇಶ್ ಎನ್ನುವವರು ಹೊಲ ಉಳುಮೆ ಮಾಡಲು  ಟ್ರಾಕ್ಟರ್ ಸಮೇತ ಬ್ರಹ್ಮಾವರ ಸಮೀಪದ ಕುರುಡಂಜಿಗೆ ಬಂದು ಸಾಯಂಕಲಾದ ವರೆಗೆ ಉಳುಮೆ ಮಾಡಿದ್ದಾನೆ. ಬರುವಾಗ ತಾನು ದುಡಿದಿರುವ 25 ಸಾವಿರ ಹಣವನ್ನು ಒಂದು ಪ್ಲಾಸ್ಟಿಕ್ ನಲ್ಲಿ ಸುತ್ತಿ ಟ್ರಾಕ್ಟರ್ ನಲ್ಲಿಟ್ಟಿದ್ದನು. ಉಳುಮೆ ಮುಗಿದೆ ಮೆಲೆ ಮನೆ  ಕಡೆ ಹೋಗಬೇಕಾದಾಗ ಸಮಯದಲ್ಲಿ ಹಣವಿರುವ ಚೀಲ ಕಳೆದುಹೋಗಿತ್ತು.

ಹಣ ಕಳೆದುಕೊಂಡ ಗಣೇಶ ಹೊಲದ ಪೂರ್ತಿ ಹುಡುಕಾಡಿದ್ದಾನೆ ಸಿಗದಿದ್ದಾಗ ಊರಿನವರಿಗೆ ಮಾಹಿತಿ ನೀಡಿದ್ದಾನೆ. ನಂತರ ಗ್ರಾಮದ ಮಹೇಶ್ ಶೆಟ್ಟಿ ಅವರು ಕೊರಗಜ್ಜನಿಗೆ ಹರಕೆ ಕಟ್ಟುವಂತೆ ಹೇಳಿದ್ದಾನೆ. ಸಲಹೆ ಮೇರೆಗೆ ಮದ್ಯ  ಬೀಡ ಚಕ್ಕಲಿಯನ್ನು ಹರಕೆಯಾಗಿ ನೀಡಿ ಮತ್ತೆ ಹೊಲಕ್ಕೆ ಹೋಗಿ ಮೊದಲು ಹುಡುಕಿರುವ ಜಾಗದಲ್ಲೆಲ್ಲ ಗ್ರಾಮಸ್ಥರ ಜೊತೆ ಹುಡುಕಾಡಿದ್ದಾನೆ ಸ್ಪಲ್ಪ ಸಮಯದಲ್ಲೆ ಕಳೆದುಹೋಗಿದ್ದ ಹಣ ಸಿಕ್ಕಿದೆ.

ಕಳೆದು ಹೋಗಿರುವ ಹಣ ಸಿಕ್ಕಿರುವ ಕಾರಣ ಇದು ಕೊರಗಜ್ಜನ ಕಾರಣಿಕ ಎಂದು ನಂಬಿದ್ದಾರೆ .

Free Bus : ಹೆಸರು ಲಕ್ಷ್ಮೀ …!ಲಿಂಗ ಪುರುಷ..?! ಕಂಡಕ್ಟರ್ ಕಕ್ಕಾಬಿಕ್ಕಿ..!

Malpe Beach : ನಿಷೇಧವಿದ್ದರೂ ಬೀಚ್ ನಲ್ಲಿ ಪ್ರವಾಸಿಗರ ಹುಚ್ಚಾಟ…!

Police-ಯುವಕನನ್ನು ಬೆತ್ತಲೆ ಮಾಡಿದ ರೌಡಿಶೀಟರಗಳು

About The Author