ಮಧ್ಯಪ್ರದೇಶ: ಬೆಲೆ ಏರಿಕೆಯಲ್ಲಿ ದೇಶಾದ್ಯಂತ ಭಾರೀ ಚರ್ಚೆ ಆಗ್ತಿರೋದು ಏನೆಂದರೆ ಟೊಮ್ಯಾಟೋ. ದಿನದಿಂದ ದಿನಕ್ಕೆ ಟೊಮ್ಯಾಟೋ ರೇಟ್ ಹೆಚ್ಚಾಗ್ತಿರೋದ್ರಿಂದ ಜನ ಕಂಗಾಲ್ ಆಗಿದ್ದಾರೆ. ‘ಬಡವರ ಬಂಧು’ನಂತೆ ಇದ್ದ ಟೊಮ್ಯಾಟೋ ರೇಟ್ ಹೆಚ್ಚಾಗ್ತಿದ್ದಂತೆಯೇ, ಹಲವು ಕಡೆಗಳಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿರೋದನ್ನು ನಿತ್ಯವೂ ಕೇಳ್ತಿದ್ದೇವೆ.
ಅಂತೆಯೇ ಮಧ್ಯಪ್ರದೇಶದ ಶಹದೊಲ್ ಜಿಲ್ಲೆಯಲ್ಲಿ ಪತಿರಾಯ, ಅಡುಗೆಗೆ ಟೊಮ್ಯಾಟೋ ಬಳಸಿದ್ದಕ್ಕೆ ಮುನಿಸಿಕೊಂಡು ಮನೆಬಿಟ್ಟು ಪರಾರಿಯಾಗಿದ್ದಾಳೆ. ವಿಚಿತ್ರ ಎನಿಸಿದರೂ ಈ ಘಟನೆ ನಡೆದಿರೋದು ಸತ್ಯ. ಮಾತ್ರವಲ್ಲ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.ಅಡುಗೆಗೆ ಗಂಡ ಎರಡು ಟೊಮ್ಯಾಟೋ ಬಳಸಿದ್ದಕ್ಕೆ ಮನೆ ಬಿಟ್ಟು ಹೋಗಿದ್ದಾಳೆ ಹೆಂಡತಿ.
ಏನಿದು ಕಥೆ..? ಅಷ್ಟಕ್ಕೂ ಪತ್ನಿಯ ಸಿಟ್ಟಿಗೆ ಕಾರಣ ಏನು ಗೊತ್ತಾ
ಸಂಜೀವ್ ಬುರ್ಮನ್ ಎಂಬಾತ ಟಿಫಿನ್ ಸೆಂಟರ್ ನಡೆಸುತ್ತಿದ್ದಾನೆ. ಇತ್ತೀಚೆಗೆ ಆತ ಅಡುಗೆಗೆ ಎರಡು ಟೊಮ್ಯಾಟೋ ಬಳಸಿದ್ದ. ಇದು ಆತನ ಪತ್ನಿಯ ಆಕ್ರೋಶಕ್ಕೆ ಕಾರಣವಾಗಿದೆ. ಯಾಕೆ ನನ್ನನ್ನು ಕೇಳದೇ ಟೊಮ್ಯಾಟೋ ಬಳಸಿದ್ದು ಅಂತಾ ದೊಡ್ಡ ಜಗಳ ಮಾಡಿದ್ದಾಳೆ.
ಇದರಿಂದ ಬೇಸರಿಸಿಕೊಂಡ ಆತನ ಪತ್ನಿ, ಮಗಳ ಜೊತೆ ಮನೆಯನ್ನೇ ಬಿಟ್ಟು ಹೋಗಿದ್ದಾಳಂತೆ. ಪತ್ನಿ ಮತ್ತು ಮಗಳು ಮನೆ ಬಿಟ್ಟು ಹೋದ ಬೆನ್ನಲ್ಲೇ ಗಂಡ ಕಂಗಾಲ್ ಆಗಿದ್ದಾನೆ. ಮಾತ್ರವಲ್ಲ, ಗಂಡ-ಹೆಂಡತಿ ಮಧ್ಯೆ ನಡೆದ ಸಣ್ಣ ಗಲಾಟೆಯ ಮಾಹಿತಿಯನ್ನು ಪೊಲೀಸರಿಗೆ ನೀಡಿ, ದಯವಿಟ್ಟು ಪತ್ನಿಯನ್ನು ಮನೆಗೆ ಕರೆದುಕೊಂಡು ಬರಲು ಸಹಾಯ ಮಾಡಿ ಎಂದು ಕಣ್ಣೀರಿಟ್ಟಿದ್ದಾನೆ ಎಂದು ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸಂಜೀವ್ ಮಾಹಿತಿ ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಪ್ರಕರಣದ ಬಗ್ಗೆ ಮಾತನಾಡಿರುವ ಸಂಜೀವ್, ಗಂಡ-ಹೆಂಡತಿ ಮಧ್ಯೆ ಅಡುಗೆಗೆ ಟೊಮ್ಯಾಟೋ ಬಳಸಿದ್ದಕ್ಕೆ ಗಲಾಟೆ ಶುರುವಾಗಿದೆ. ಅಷ್ಟಕ್ಕೂ ಪತ್ನಿಯ ಕೋಪಕ್ಕೆ ಕಾರಣ, ಟೊಮ್ಯಾಟೋ ಬಳಸುವ ಮೊದಲು ಯಾಕೆ ತನ್ನನ್ನು ಕೇಳಲಿಲ್ಲ ಎಂದು. ವಿಚಾರಣೆ ನಡೆಯುತ್ತಿದೆ, ಶೀಘ್ರದಲ್ಲೇ ಬೇರೆಯಾಗಿರುವ ಜೋಡಿಯನ್ನು ಒಂದು ಮಾಡುತ್ತೇವೆ ಎಂದು ಪೊಲೀಸ್ ಅಧಿಕಾರಿ ಸಂಜೀವ್ ತಿಳಿಸಿದ್ದಾರೆ.
Spain: ಭಾರ ಜಾಸ್ತಿ ಇದೆಯೆಂದು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಪೈಲೆಟ್