ಹಾಸನ: ಹಾಸನ ಬಡಾವಣಾ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ವರದಕ್ಷಣೆ ತರುವುದಾಗಿ ಕಿರುಕುಳ ನೀಡಿ ಗಂಡನೆ ಹೆಂಡತಿಯನ್ನು ಕೊಲೆ ಮಾಡಿದ್ದಾನೆಂದು ಪತ್ನಿ ಪೋಷಕರಿಂದ ಆರೋಪ ಮಾಡಿ ಠಾಣಿಗೆ ದೂರನ್ನು ದಾಖಲಿಸಿದ್ದಾರೆ
ಬೇಲೂರು ತಾಲ್ಲೂಕಿನ, ಅರೇಹಳ್ಳಿ ಹೋಬಳಿ ಮೂರೇಹಳ್ಳಿ ಗ್ರಾಮದ ಯೋಗೇಶ್ ಎನ್ನುವವರು ಕಳೆದ ಆರು ವರ್ಷದ ಹಿಂದೆ ಯಡಿಯಾರು ಗ್ರಾಮದ ಅನಿತಾ ಎನ್ನುವವರನ್ನು ಮದುವೆಯಾಗಿದ್ದರು ಆದರೆ ನಂತರ ಪದೇ ಪದೇ ಪತ್ನಿಗೆ ತವರು ಮನೆಯಿಂದ ವರದಕ್ಷಣೆ ತರುವಂತೆ ಕಿರುಕುಳ ನೀಡಿ ತವರು ಮನೆಗೆ ಕಳುಹಿಸುತಿದ್ದನು.
ಆಗೆಲ್ಲ ಊರಲ್ಲಿ ಹಿರಿಯರೆಲ್ಲ ಪಂಚಾಯಿತಿ ಮಾಡಿ ದಂಪತಿಗಳನ್ನು ರಾಜಿ ಸಂದಾನ ಮಾಡಿ ಗಂಡನ ಮನೆಗೆ ಕಳುಹಿಸುತಿದ್ದರು. ಆದರೆ ಕಳೆದ ಒಂದು ವಾರದ ಹಿಂದೆ ಜಗಳವಾಡಿ ತವರು ಮನೆಗೆ ಕಳುಹಿಸಿದ್ದನು ಮತ್ತೆ ಹಿರಿಯರೆಲ್ಲಾ ಸೇರಿ ರಾಜಿ ಸಂಧಾನ ಮಾಡಿದ್ದರು ಆದರೆ ನಿನ್ನೆ ಪತಿ ಯೋಗೀಶ್ ಹಲ್ಲೆ ಮಾಡಿದ್ದಾನೆಂದು ಪೋಷಕರಿಗೆ ಅನಿತಾ ಕರೆ ಮಾಡಿದ್ದಾಳೆ ನಂತರ ಹಾಸನದಿಂದ ಯಡಿಯೂರಿಗೆ ಬರುವಷ್ಟರಲ್ಲಿ ಅನಿತಾ ಸಾವನ್ನಪ್ಪಿದ್ದಾಳೆ
ಯೋಗಿಶನೆ ಅನೀತಾಳನ್ನು ಕಿರುಕುಳ ನೀಡಿ ನಿನ್ನೆ ಹತ್ಯೆ ಮಾಡಿದ್ದಾನೆಂಬ ಆರೋಪದಡಿ ಅನಿತಾ ಪೋಷಕರು ಯೋಗೀಶನ ವಿರುದ್ದ ಹಾಸನ ಬಡಾವಣೆಯಲ್ಲಿ ಪೋಲಿಸ್ ಠಾಣೆಯಲ್ಲಿ ಅನಿತಾ ಪೋಷಕರು ದೂರನ್ನು ದಾಖಲಿಸಿದ್ದಾರೆ.
Karemma G Nayak-ನನಗೆ ಬೆದರಿಕೆ ಕರೆಗಳು ಬರುತ್ತಿವೆ- ಭದ್ರತೆ ಒದಗಿಸಿ