- Advertisement -
Karkala News: ಕಾರ್ಕಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬೈದರ್ಕಳ ಪಾತ್ರಿ ಹಿರ್ಗಾನ ಲೋಕು ಪೂಜಾರಿ (98) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾಗಿದ್ದಾರೆ.
ಬೈದರ್ಕಳ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಅವರು ಹಿರ್ಗಾನ ಹಾಡಿ ಗರಡಿ ಸೇರಿದಂತೆ ಕಾರ್ಕಳ ಮತ್ತು ಜಿಲ್ಲೆಯ ಗರಡಿ ಗಳಲ್ಲಿ ಪಾತ್ರಿಯಾಗಿ ಸೇವೆ ಸಲ್ಲಿಸಿದರು. ಮೃತರಿಗೆ ಪತ್ನಿ, ಮೂವರು ಪುತ್ರರು ಮತ್ತು ಪುತ್ರಿ ಇದ್ದಾರೆ. ಇವರ ದೈವಾರಾಧನೆಯ ಸಾಧನೆ ಗಾಗಿ 2022ರಲ್ಲಿ ಉಡುಪಿ ಜಿಲ್ಲಾಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.
- Advertisement -