Monday, December 23, 2024

Latest Posts

Hubli : ಹುಬ್ಬಳ್ಳಿಯ ಹೃದಯ ಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

- Advertisement -

ಹುಬ್ಬಳ್ಳಿ: ನಗರದ ಹೃದಯ ಭಾಗದಲ್ಲಿ ಕೆಎಂಸಿ ಹಿಂದಿನ ಗೇಟ್ ಬಳಿ ರಸ್ತೆ ಬದಿಯಲ್ಲಿ ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು‌ ಬಂಧಿಸುವಲ್ಲಿ ವಿದ್ಯಾನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ದರ್ಶನ್ ಸಾಳುಂಕೆ ಎಂಬಾತನೇ ಗಾಂಜಾ ಮಾರಾಟ ಮಾಡುತ್ತಿದ್ದ, ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧಿತ ಆರೋಪಿಯಿಂದ 6550 ರೂ ಮೌಲ್ಯದ 131 ಗ್ರಾಂ ತೂಕದ ಗಾಂಜಾ ಹಾಗೂ ಗಾಂಜಾ ಮಾರಾಟದಿಂದ ಪಡೆದ ಲಾಭ 560/- ನಗದು ವಶಪಡಿಸಿಕೊಂಡಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇನ್ನೂ ವಿದ್ಯಾನಗರ ಪೊಲೀಸ ಠಾಣೆಯ ಇನ್ಸ್ಪೆಕ್ಟರ್ ಸಂತೋಷ್ ಪವಾರ್ ಅವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ. ಜಿ, ಎನ್. ಕಲ್ಯಾಣಿ ಅವರ ನೇತೃತ್ವದಲ್ಲಿ, ಕ್ರೈಂ ಸಿಬ್ಬಂದಿಗಳಾದ ಶಿವಾನಂದ್ ತಿರಕಣ್ಣವರ್, ರಮೇಶ್ ಹಲ್ಲೆ, ಸೈಯದ್ ತಹಶೀಲ್ದಾರ್ ಹಾಗೂ ಮಲ್ಲಿಕಾರ್ಜುನ್ ದನಿಗೊಂಡ ಅವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Narway- ಸಾವನ್ನೇ ನಿಷೇಧಿಸಿದ ದೇಶ ಇಲ್ಲಿ ಸಾವೇ ಆಗುವುದಿಲ್ಲ..!

Spain: ಭಾರ ಜಾಸ್ತಿ ಇದೆಯೆಂದು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಪೈಲೆಟ್

Hareesh Shetty : ಬಸ್ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ

- Advertisement -

Latest Posts

Don't Miss